", "articleSection": "Politics,Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/229640-1738750239-1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ದ.ಕ.ಜಿಲ್ಲೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸಲು, ಬ್ರಹ್ಮರಕೂಟ್ಲು ಟೋಲ್‌ಗೇಟ್ ತೆರವಿಗೆ, ಹೊಸ ಟೋ...Read more" } ", "keywords": "Mangaluru News, National Highway Chaos, Toll Gate Protest, Action Committee, Dharna Satyagraha, Suratkal Toll Gate, Karnataka News, Highway Protests, Toll Gate Controversy ,Udupi,Mangalore,Politics,Infrastructure,Government", "url": "https://publicnext.com/node" } ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಆಗರ- ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಧರಣಿ ಸತ್ಯಾಗ್ರಹ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಆಗರ- ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಧರಣಿ ಸತ್ಯಾಗ್ರಹ

ಮಂಗಳೂರು: ದ.ಕ.ಜಿಲ್ಲೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸಲು, ಬ್ರಹ್ಮರಕೂಟ್ಲು ಟೋಲ್‌ಗೇಟ್ ತೆರವಿಗೆ, ಹೊಸ ಟೋಲ್‌ಗೇಟ್‌ಗಳನ್ನು ಅಳವಡಿಸುವ ಸಂದರ್ಭ ಅಂತರದ ನಿಯಮಗಳ ಪಾಲಿಸಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟು ನಂತೂರು ಜಂಕ್ಷನ್‌ನಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಸಾಮೂಹಿಕ ಧರಣಿ ನಡೆಸಿತು.

ಮೇಲ್ದರ್ಜೆಗೇರುತ್ತಿರುವ ಬಿ.ಸಿ.ರೋಡ್-ಚಾರ್ಮಾಡಿ, ನಂತೂರು-ಕಾರ್ಕಳ ಹೆದ್ದಾರಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಬೇಕು. ಪೂರ್ತಿ ಹದಗೆಟ್ಟಿರುವ ಸುರತ್ಕಲ್-ನಂತೂರು ಹೆದ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಗೊಳಿಸಬೇಕು, ಸ್ಥಗಿತಗೊಂಡಿರುವ ನಂತೂರು ಮೇಲ್ಸೇತುವೆ, ಕೂಳೂರು ನೂತನ ಸೇತುವೆ ಕಾಮಗಾರಿಗಳನ್ನು ಕಾಲಮಿತಿಯ ಒಳಗಡೆ ಪೂರ್ಣಗೊಳಿಸಬೇಕು ಮುಂತಾದ ಅತ್ಯಂತ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸಾಮೂಹಿಕ ಧರಣಿ ನಡೆಯಿತು. ಸಮಸ್ಯೆಗಳು ಬಗೆ ಹರಿಯುವವರೆಗೆ ಹಲವು ಹಂತಗಳಲ್ಲಿ ಹೋರಾಟವನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಹೋರಾಟ ಸಮಿತಿ ತಿಳಿಸಿತು.

ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ಸಿಬ್ಬಂದಿ ಗೂಂಡಾಗಳ ಮೂಲಕ ಹಣ ಕಲೆಕ್ಷನ್ ಮಾಡುತ್ತಾರೆ. ಅಲ್ಲಿರುವುದು ಟೋಲ್ ಅಲ್ಲ, ಅದೊಂದು ಶೆಡ್. ಈ ಟೋಲ್‌ಗೇಟ್ ತೆರವು ಹೋರಾಟ ಮುಂದಿನ ದಿನಗಳಲ್ಲಿ ಆಗಲಿದೆ. ನಂತೂರು ಹೆದ್ದಾರಿ ಕಾಮಗಾರಿ ಆರಂಭಿಸಿ, ಸದ್ಯ ನಿಲ್ಲಿಸಲಾಗಿದೆ. ನಂತೂರು ಜಂಕ್ಷನ್‌ನಲ್ಲಿ ಒಂದಷ್ಟು ಜಾಗ ಸಮತಟ್ಟು ಮಾಡಿ ಅಲ್ಲಿ ಶಾಸಕರು- ಸಂಸದರು ಬ್ಯಾನರ್, ಫ್ಲೆಕ್ಸ್ ಅಳವಡಿಸುತ್ತಿದ್ದಾರೆ. ಇದು ಅವರ ಬ್ಯಾನರ್ ಹಾಕಲು ಮಾಡಿದ ಸ್ಥಳವೇ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ಕೇಳಿ ಬಂತು.

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಮಾಣಿ ನೇರಳಕಟ್ಟೆಯಲ್ಲಿ ಹೊಸ ಟೋಲ್‌ಗೇಟ್ ಆಗುತ್ತಿದೆ. ಅದು ಬ್ರಹ್ಮರಕೂಟ್ಲು ಟೋಲ್‌ಗೇಟ್‌ ನಿಂದ 11ಕಿ.ಮೀ. ದೂರವಿದೆಯಷ್ಟೇ?. ಹೆದ್ದಾರಿ ಪ್ರಾಧಿಕಾರ ಸಚಿವ ನಿತಿನ್ ಗಡ್ಕರಿಯವರೇ ಸದನದಲ್ಲಿ 60 ಕಿ.ಮೀ. ಅಂತರದಲ್ಲಿ ಟೋಲ್‌ಗೇಟ್ ಮಾಡಿದ್ರೆ ಅದು ಅಕ್ರಮ ಎಂದಿದ್ದರು. ಹಾಗಾದರೆ ಜಿಲ್ಲೆಯಲ್ಲಿ ಆಗುತ್ತಿರುವ ಟೋಲ್ ಅಕ್ರಮ ಅಲ್ಲವೇ ಎಂದು ಸಂಸದ ಬ್ರಿಜೇಶ್ ಚೌಟ ಹೇಳಬೇಕು. ನಂತೂರು - ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಳೆಗಾಲಕ್ಕೂ ಮೊದಲು ಮುಗಿಸಬೇಕು. ಈ‌ ಪ್ರತಿಭಟನೆ ಈ ಭಾಗದ ಸಂಸದರು- ಶಾಸಕರಿಗೆ ಎಚ್ಚರಿಕೆ. ಇಲ್ಲದಿದ್ದರೆ ಈ ಹೋರಾಟ ಇನ್ನೂ ತೀವ್ರವಾಗಲಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.

Edited By : Manjunath H D
PublicNext

PublicNext

05/02/2025 03:40 pm

Cinque Terre

13.89 K

Cinque Terre

0

ಸಂಬಂಧಿತ ಸುದ್ದಿ