", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/52563-1738753418-5d5f5f34-e01e-46e6-948e-18d1c995e646.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಇಷ್ಟು ದಿನ ಸೈಲೆಂಟ್ಟಾಗಿದ್ದ ಬಿಟ್ ಕಾಯಿನ್ ಪ್ರಕರಣ ಈಗ ಮತ್ತೆ ಸೌಂಡ್ ಮಾಡ್ತಿದೆ. ಎಸ್ ಐ ಟಿ ಅಧಿಕಾರಿಗಳು ಕಾಂಗ್ರೆಸ್ ಯುವ ಘಟಕದ ಅ...Read more" } ", "keywords": "Another notice to Nalapad in Bitcoin scam,Bangalore,Bangalore-Rural,Crime,Law-and-Order", "url": "https://publicnext.com/node" }
ಬೆಂಗಳೂರು : ಇಷ್ಟು ದಿನ ಸೈಲೆಂಟ್ಟಾಗಿದ್ದ ಬಿಟ್ ಕಾಯಿನ್ ಪ್ರಕರಣ ಈಗ ಮತ್ತೆ ಸೌಂಡ್ ಮಾಡ್ತಿದೆ. ಎಸ್ ಐ ಟಿ ಅಧಿಕಾರಿಗಳು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷನಿಗೆ ನೋಟಿಸ್ ನೀಡಿದ್ದಾರೆ.
ಹೌದು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದ ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ಎಸ್ ಐ ಟಿ ಅಧಿಕಾರಿಗಳು ಚುರುಕು ಮಾಡಿದ್ದಾರೆ. ಪ್ರಮುಖ ಆರೋಪಿ ಶ್ರೀ ಕೃಷ್ಟ ಅಲಿಯಾಸ್ ಶ್ರೀಕಿ ಜೊತೆ ವ್ಯವಹಾರದ ಲಾಭಂಶದ ಒಡನಾಟ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆ ಯುವ ಘಟಕದ ಅಧ್ಯಕ್ಷ ನಲಪಾಡ್ ಗೆ ಸಿಆರ್ ಲಿಸಿ 41 ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ.
ಏಳನೇ ತಾರೀಖು ವಿಚಾರಣೆಗೆ ಬರಬೇಕೆಂದು ಹೇಳಲಾಗಿದೆ. ಶ್ರೀಕಿ ಬಂಧನ ವೇಳೆಯಲ್ಲಿ ಹಲವರ ಜೊತೆ ನಂಟು ಹೊಂದಿದ್ದ ಆರೋಪಿಗಳನ್ನು ಕೂಡ ವಿಚಾರಣೆ ನಡೆಸಲಾಗಿದೆ.
ಇನ್ನೂ ಸಿಸಿಬಿ ಅಧಿಕಾರಿಗಳು ನಡೆಸಿದ್ದ ತನಿಖೆಯಲ್ಲೇ ಲೋಪವಿದ್ದು .ಅವರು ತನಿಖೆ ನಡೆಸಿ ಜಪ್ತಿ ಮಾಡಿದ್ದ ಟೆಕ್ನಿಕಲ್ ಎವಿಡೆನ್ಸ್ ಗಳನ್ನ ತಿರುಚಲಾಗಿದೆ ಎಂದು ತನಿಖೆ ನಡೆಸಿದ ಎಸ್ ಐಟಿ ಅಧಿಕಾರಿಗಳು ನ್ಯಾಯಾಲಯ ಕ್ಕೆ ವರದಿ ನೀಡಿದ್ರು. ಇದರ ಹಿನ್ನಲೆ ಡಿವೈಎಸ್ ವಿ ಪ್ರಶಾಂತ್ ಪೂಜಾರ್ ನ್ನ ಕೂಡ ಅರೆಸ್ಟ್ ಮಾಡಲಾಗಿತ್ತು. ಕೆಂಪೇಗೌಡ ನಗರ, ಅಶೋಕ್ ನಗರ, ಹಾಗೂ ಕಾಟನ್ ಪೇಟೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು.
ಪ್ರಮುಖ ಆರೋಪಿ ಶ್ರೀಕಿಯನ್ನು 2017 ರಲ್ಲಿ ತುಮಕೂರಿನಲ್ಲಿ ಬಂಧಿಸಲಾಗಿತ್ತು , ಇತನಿಂದ ತನಿಖಾಧಿಗಳು ಸೇರಿದಂತೆ ಅನೇಕರು ಲಾಭಾಂಶ ವನ್ನು ಪಡೆದುಕೊಂಡಿದ್ದಾರೆಂದು ಆರೋಪಿಸಿ ತನಿಖೆ ನಡೆಸಲಾಗುತ್ತಿದೆ.
Kshetra Samachara
05/02/2025 04:33 pm