ಬೆಂಗಳೂರು: ಕುಂಭಮೇಳ ಟೂರ್ ಪ್ಯಾಕೇಜ್ ಅಂತ ಆನ್‌ಲೈನ್‌ನಲ್ಲಿ ಸಿಕ್ಕ ಸಿಕ್ಕ ಸೈಟ್‌ಗಳನ್ನ ಕ್ಲಿಕ್ ಮಾಡೋ ಮುನ್ನ ಇರಲಿ ಎಚ್ಚರ.
ಹೌದು. ಹಿಂದೂಗಳ ಭಾವನೆಯೇ ಬಂಡವಾಳ ಮಾಡಿಕೊಂಡು ಕುಂಭಮೇಳದ ಹೆಸರಿನಲ್ಲಿ ಸೈಬರ್ ವಂಚಕರು ವಂಚನೆಗಿಳಿದಿದ್ದಾರೆ. ಪ್ರಯಾಗ್‌ರಾಜ್‌ನ ಕುಂಭಮೇಳಕ್ಕೆ ಹೊರಟವರೇ ಇವರ ಟಾರ್ಗೆಟ್ ಆಗಿದ್ದಾರೆ.
ಟೂರ್ & ಟ್ರಾವೆಲ್ಸ್ ಕಂಪನಿಯಿಂದ ಕಾಲ್ ಮಾಡ್ತಿರೋದು ಅಂತ ಕಾಲ್ ಮಾಡುವ ಖದೀಮರು ಸಾವಿರಾರು ರೂಪಾಯಿ ಹಾಕುತ್ತಿದ್ದಂತೆ ಮೊಬೈಲ್ ಸ್ವಿಚ್‌ಆಫ್ ಮಾಡಿ ಎಸ್ಕೇಪ್ ಆಗ್ತಾರೆ. ಜ್ಞಾನಭಾರತಿ ಠಾಣೆಯಲ್ಲಿ ಸೈಬರ್ ವಂಚಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜ್ಞಾನಭಾರತಿ ಮೊದಲ ಹಂತದ ನಿವಾಸಿಯೊಬ್ಬರು ಕುಂಭಮೇಳಕ್ಕೆ ಹೋಗಲು ಪ್ಲ್ಯಾನ್ ಮಾಡಿದ್ದರು. ಹೇಗೆ ಹೋಗುವುದು ಅಂತ ಗೂಗಲ್‌ನಲ್ಲಿ ಸರ್ಚ್ ಮಾಡಿದರು. ಸರ್ಚ್ ಮಾಡಿ ಕೆಲ ಸಮಯದ ನಂತರ ಅಪರಿಚಿತ ನಂಬರ್‌ನಿಂದ ಕರೆ ಬಂದಿದೆ. ನಾನು ರಾಕೇಶ್, ಸುಬ್ರಹ್ಮಣ್ಯ ಟೂರ್ ಕಂಪನಿಯಿಂದ ಅಂತ ಪರಿಚಯ ಮಾಡಿಕೊಳ್ಳುತ್ತಾನೆ.
ನಮ್ಮದು ಟೂರ್ ಪ್ಯಾಕೇಜ್ ಕಂಪನಿಯಿದೆ, ನೀವು ಪ್ರಯಾಗ್ ರಾಜ್ ಹೋಗಲು ಇಷ್ಟಪಡುತ್ತೀರಾ ಅಂತ ಕೇಳಿದ್ದಾನೆ. ನಾವು ಕಡಿಮೆ ರೇಟ್‌ನಲ್ಲಿ ಕುಂಭಮೇಳಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ. ಬಳಿಕ ವಾಟ್ಸಪ್‌ನಲ್ಲಿ ಟ್ರಿಪ್ ಪ್ಲ್ಯಾನ್ ಹಾಗೂ ಕಂಪನಿ ಫೇಸ್‌ಬುಕ್ ಪೇಜ್ ಲಿಂಕ್ ಕಳಿಸುತ್ತಾನೆ. ಆತನ ಬಣ್ಣದ ಮಾತು ನಂಬಿದ ದೂರುದಾರ ನಾನು ಬರುವುದಾಗಿ ಒಪ್ಪಿಕೊಳ್ಳುತ್ತಾರೆ. ಹಂತ ಹಂತವಾಗಿ ಅಪರಿಚಿತ ವ್ಯಕ್ತಿ ನೀಡಿದ ಫೋನ್ ಪೇ ನಂಬರ್‌ಗೆ 64 ಸಾವಿರ ಹಣ ಹಾಕುತ್ತಾರೆ. ಹಣ ಹಾಕಿದ ನಂತರ ಕರೆ ಮಾಡಿದ್ರೆ ಸ್ವೀಕಾರ ಮಾಡದ ಅಪರಿಚಿತ ವ್ಯಕ್ತಿ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಇದರಿಂದ ಅನುಮಾನಗೊಂಡು ತಕ್ಷಣ ಸೈಬರ್ ಸಹಾಯವಾಣಿಯಲ್ಲಿ ದೂರು ದಾಖಲಿಸಿ ಬಳಿಕ ಜ್ಞಾನಭಾರತಿ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ನಂಬರ್ ಸ್ವಿಚ್ ಆಫ್, ಫೇಸ್ ಬುಕ್ ಪೇಜ್ ಡಿಲೀಟ್ ಆಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರಿಸಿದ್ದಾರೆ.
PublicNext
05/02/2025 10:22 am