ಬೆಂಗಳೂರು: ಟ್ರ್ಯಾಕ್ಟರ್ ಕಳ್ಳತನ ಮಾಡ್ತಿದ್ದ ವೇಳೆ ಕಳ್ಳರು ಕೋಣನಕುಂಟೆ ಪೊಲೀಸ್ರ ಕೈಗೆ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ. ಸಾಧಿಕ್, ಸೈಫುಲ್ಲಾ, ಪರ್ವೇಜ್, ಸಾಧಿಕ್ ಬಂಧಿತ ಆರೋಪಿಗಳಾಗಿದ್ದಾರೆ. ತುಮಕೂರಿನ ನೊಣವಿನಕೆರೆಯಲ್ಲಿ ಕೋಣನಕುಂಟೆ ಪೊಲೀಸ್ರ ಕೈಗೆ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಬಂಧಿತರು ಬೆಂಗಳೂರಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಗಳ ಕಳ್ಳತನ ಮಾಡ್ತಿದ್ರು. ಇಲ್ಲಿ ಕದ್ದ ಟ್ರ್ಯಾಕ್ಟರ್ ಗಳನ್ನ ನೊಣವಿನಕೆರೆಯ ಸೈಫುಲ್ಲ ಎಂಬಾತನಿಗೆ ಮಾರಾಟ ಮಾಡ್ತಿದ್ರು.
ಸದ್ಯ ಬಂಧಿತರಿಂದ 20 ಲಕ್ಷ ಮೌಲ್ಯದ ನಾಲ್ಕು ಟ್ರ್ಯಾಕ್ಟರ್ ಗಳನ್ನ ಸೀಜ್ ಮಾಡಲಾಗಿದೆ. ಮೊದಲು ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಕಳ್ಳತನ ಮಾಡಿದ್ರು. ಸಿಸಿಟಿವಿ ದೃಶ್ಯ ಆಧರಿಸಿ ಪರಿಶೀಲನೆ ನಡೆಸಿದ್ದ ಪೊಲೀಸರು ನೊಣವಿನಕೆರೆವರೆಗೆ ಫಾಲೋ ಮಾಡಿಕೊಂಡು ಹೋಗಿದ್ರು. ಆದರೆ ಮೊದಲಿಗೆ ಪೊಲೀಸರಿಗೆ ಆರೋಪಿಗಳು ಸಿಕ್ಕಿರಲಿಲ್ಲ. ಮತ್ತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಟ್ರ್ಯಾಕ್ಟರ್ ಕಳ್ಳತನವಾಗಿತ್ತು. ವಿಚಾರ ಗೊತ್ತಾಗಿ ನೊಣವಿನ ಕೆರೆಯಲ್ಲಿ ಕಾಯುತ್ತಿದ್ದ ಪೊಲೀಸರಿಗೆ ಆರೋಪಿಗಳು ಟ್ರ್ಯಾಕ್ಟರ್ ಜೊತೆಗೆ ಬರ್ತಿದ್ದಂತೆ ಲಾಕ್ ಆಗಿದ್ದಾರೆ.ಸದ್ಯ ಕೋಣನಕುಂಟೆ ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಹಣ ಸಂಪಾದನೆ ಮಾಡಲು ಟ್ರ್ಯಾಕ್ಟರ್ ಕಳ್ಳತನದ ಹಾದಿ ಹಿಡಿದಿದ್ರು ಎಂದು ತಿಳಿದು ಬಂದಿದೆ. ಇನ್ನೂ ಟ್ರ್ಯಾಕ್ಟರ್ ಡೌನ್ ನಲ್ಲಿ ನಿಂತಿದ್ದಂತೆ ತಳ್ಳಿ ಸ್ಟಾರ್ಟ್ ಮಾಡಿಕೊಳ್ತಿದ್ದ ಆರೋಪಿಗಳು ಟ್ರ್ಯಾಕ್ಟರ್ ತೆಗೆದುಕೊಂಡು ಸೀದಾ ನೊಣವಿನಕೆರೆಗೆ ಹೋಗ್ತಿದ್ರು. ಕದ್ದ ಟ್ರ್ಯಾಕ್ಟರ್ ಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡ್ತಿದ್ರಂತೆ.
PublicNext
05/02/2025 01:28 pm