ಬೆಂಗಳೂರು: ಕ್ರಿಕೆಟ್ ಜಗತ್ತಿನ ದಿಗ್ಗಜ ರಾಹುಲ್ ದ್ರಾವಿಡ್ ಕಾರ್‌ಗೆ ಗೂಡ್ಸ್ ಆಟೋ ಡಿಕ್ಕಿಯಾಗಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಸಂಜೆ ಘಟನೆ ನಡೆದಿದೆ.
ಕಾರ್ ಟಚ್ ಆದ ಬಳಿಕ ಕಾರಿನಿಂದ ಕೆಳಗಿಳಿದು ಪರಿಶೀಲಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನಿಂದ ಹೈಗ್ರೌಂಡ್ ಕಡೆ ಹೋಗುವಾಗ ಘಟನೆ ಸಂಭವಿಸಿದೆ. ಈ ವೇಳೆ ದ್ರಾವಿಡ್ - ಗೂಡ್ಸ್ ಆಟೋ ಚಾಲಕನ ಮಧ್ಯೆ ಸಣ್ಣ ವಾಗ್ವಾದ ನಡೆದಿದ್ದು ಸದ್ಯ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಇಂದು ಸಂಜೆ 6.30 ಕ್ಕೆ ಘಟನೆ ನಡೆದಿದ್ದು, ಟ್ರಾಫಿಕ್ ಜಾಮ್ ಇದ್ದಾಗ ನಿಂತಿದ್ದ ಕಾರಿಗೆ ಆಟೋ ಡಿಕ್ಕಿಯಾಗಿದೆ. ಹಿಂದೆಯಿಂದ ಬಂದು ಆಟೋ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಮಾತುಕತೆ ಬಳಿಕ ಆಟೋ ಚಾಲಕನ ನಂಬರ್ ಪಡೆದು ದ್ರಾವಿಡ್ ಹೋಗಿದ್ದಾರೆ.
PublicNext
04/02/2025 09:58 pm