", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/395416_1738752589_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenMetreBidar" }, "editor": { "@type": "Person", "name": "8748919992" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೀದರ್ : ಬೀದರ್ ನಿಂದ ಭಂಗೂರ ನಡುವೆ ನಿತ್ಯ ಐದು ಟ್ರಿಪ್ ಸಂಚರಿಸಲಿರುವ ಸಾರಿಗೆ ಸಂಸ್ಥೆ ಬಸ್ ಸಂಚಾರಕ್ಕೆ ಬುಧವಾರ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ...Read more" } ", "keywords": "Node,Bidar,News Bidar: 'System of special bus traffic'- MLA Shailendra Beldale drive,News", "url": "https://publicnext.com/node" } ಬೀದರ್ : 'ವಿಶೇಷ ಬಸ್ ಸಂಚಾರದ ವ್ಯವಸ್ಥೆ'- ಶಾಸಕ ಶೈಲೇಂದ್ರ ಬೆಲ್ದಾಳೆ ಚಾಲನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್ : 'ವಿಶೇಷ ಬಸ್ ಸಂಚಾರದ ವ್ಯವಸ್ಥೆ'- ಶಾಸಕ ಶೈಲೇಂದ್ರ ಬೆಲ್ದಾಳೆ ಚಾಲನೆ

ಬೀದರ್ : ಬೀದರ್ ನಿಂದ ಭಂಗೂರ ನಡುವೆ ನಿತ್ಯ ಐದು ಟ್ರಿಪ್ ಸಂಚರಿಸಲಿರುವ ಸಾರಿಗೆ ಸಂಸ್ಥೆ ಬಸ್ ಸಂಚಾರಕ್ಕೆ ಬುಧವಾರ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಈ ಮಾರ್ಗದಲ್ಲಿ ವಿಶೇಷ ಬಸ್ ಸಂಚಾರದ ವ್ಯವಸ್ಥೆ ಮಾಡಿದ್ದಾರೆ. ಬೀದರ್ ನಗರದ ಹಳೇ ಬಸ್ ನಿಲ್ದಾಣದ ಆವರಣದಲ್ಲಿ ಬಸ್ ಗೆ ವಿಶೇಷ ಪೂಜೆ ಸಲ್ಲಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

ಬಳಿಕ ಇದೇ ಬಸ್ ನಲ್ಲಿ ಶಾಸಕರು ಬಸವೇಶ್ವರ ವೃತ್ತದವರೆಗೆ ಪ್ರಯಾಣಿಕರ ಜೊತೆಗೆ ಟಿಕೆಟ್ ಪಡೆದು ಸಂಚರಿಸಿದರು. ಬೀದರ್ ನಿಂದ ಹೊರಟ ಬಸ್ ಅಮಲಾಪುರ, ನಾಗುರಾ, ಯಾಕತಪುರ, ಮನ್ನಳ್ಳಿ, ಹೊಕ್ರಾಣಾ, ರಾಜಗೀರಾ, ಸಿಂದೋಲ್ ಮೂಲಕ ಭಂಗೂರ ತಲುಪಲಿದೆ. ಇದೇ ಮಾರ್ಗವಾಗಿ ವಾಪಸ್ಸಾಗಲಿದೆ.

ನಿತ್ಯ ಐದು ಟ್ರಿಪ್ ಸಂಚಾರ ಮಾಡಲಿದೆ. ಬಹು ದಿನದ ಸಮಸ್ಯೆ ನಿವಾರಿಸಿದ ಶಾಸಕರಿಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕರು ವಿದ್ಯಾರ್ಥಿಗಳಿಗೆ ಕೊಟ್ಟ ಭರವಸೆಯಂತೆ ಹಾಗೂ ಪ್ರವಾಸ ಕೈಗೊಂಡಾಗ ಸಾರ್ವಜನಿಕರು ಗ್ರಾಮೀಣ ವ್ಯಾಪ್ತಿಯಲ್ಲಿ ಸಾರಿಗೆ ಬಸ್ ಸಂಚಾರ ಆರಂಭಿಸುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು ಸಾರಿಗೆ ಬಸ್ ಸಂಚಾರ ಆರಂಭಿಸಲಾಗಿದೆ ಎಂದರು.

ಸರ್ಕಾರದ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದ್ದು ಮಹಿಳೆಯರಿಗೆ ಉಪಯುಕ್ತವಾಗಿದೆ ಆದರೆ ಬಸ್ ಸಂಖ್ಯೆ ಕಡಿಮೆಯಾಗಿ ವಿದ್ಯಾರ್ಥಿಗಳು, ವೃದ್ಧರು, ಅಂಗವಿಕಲರಿಗೆ ಸೀಟು ಸಿಗದೆ ಅನಾನುಕೂಲವಾಗುತ್ತಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಾದ್ಯಂತ ಬಸ್ ಗಳ ಸಂಖ್ಯೆ ಹೆಚ್ಚಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್, ವಿಭಾಗೀಯ ಸಂಚಾರಿ ಅಧಿಕಾರಿ ಇಂದ್ರಶೇನ್ ಬಿರಾದಾರ, ಘಟಕ ವ್ಯವಸ್ಥಾಪಕರು ವಿಠ್ಠಲರಾವ ಕದಮ್, ಮುಖಂಡರಾದ ನಾಗೇಶ್ ಪಾಟೀಲ್, ಸದಾನಂದ ಜೋಶಿ, ಶೇಖರ ನೌಬಾದೆ, ಸೂರ್ಯಕಾಂತ ಹಾಗೂ ಸಾರಿಗೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
PublicNext

PublicNext

05/02/2025 04:19 pm

Cinque Terre

4.98 K

Cinque Terre

0

ಸಂಬಂಧಿತ ಸುದ್ದಿ