ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್ : ಕಾರ್ಯ ಎಂಬ ಮೂಢ ಸಂಪ್ರಾದಾಯ ಸಂಪೂರ್ಣವಾಗಿ ತಡೆಯಲು ಮನವಿ

ಬೀದರ್ : ಹುಮನಾಬಾದ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕಾರ್ಯ ಎಂಬ ಮೂಢ ಸಂಪ್ರದಾಯವು ನಡೆಯುತ್ತಿದ್ದು, ಆ ಸಂಪ್ರದಾಯ ಸಂಪೂರ್ಣವಾಗಿ ತಡೆಯಬೇಕು ಎಂದು ಭಾರತೀಯ ದಲಿತ ಪ್ಯಾಂಥರ ಸಂಘಟನೆ ಮನವಿ ಮಾಡಿದೆ.

ಇಂದು ಹುಮನಾಬಾದ್ ತಹಸೀಲ್ದಾರ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕಾರ್ಯ ಎಂಬ ಮೂಢ ಸಂಪ್ರಾದಾಯ ಹಲವು ವರ್ಷಗಳ ಹಿಂದೆ ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಆದರೆ ಇತ್ತೀಚಿಗೆ ಎಲ್ಲ ಹಳ್ಳಿಗಳಲ್ಲಿ ಆ ಸಂಪ್ರದಾಯ ಪುನಃ ಆರಂಭಿಸಿದ್ದಾರೆ. ಈ ಸಂಪ್ರಾದಾಯದಲ್ಲಿ ಜಾಣೆ, ಪೋತೆ ಎಂಬುವರನ್ನು ಮೆರೆಸುತ್ತಾ ಅರವನ್ನು ಬೀದಿ ಬೀದಿ ಯಲ್ಲಿ ಕುಣಿಸುತ್ತಾ ಮನರಂಜನೆ ಮಾಡಲಾಗುತ್ತದೆ. ಹಾಗೆಯೇ ಮಂದಿರದ ಮುಂದೆ ಒಂದು ಕುರಿಮರಿಯನ್ನು ಪೋತೆ ಎಂಬಬಾತ ಜನರ ಎದುರಲ್ಲೇ ತನ್ನ ಹಲ್ಲಿನಿಂದ ಅದರ ಕುತ್ತಿಗೆ ಹರಿಯುತ್ತಾನೆ. ಈ ರೀತಿಯ ಕ್ರೂರ, ಮೂಢ ಸಂಪ್ರಾದಾಯ ಜನರ ಮೇಲೆ ದುಷ್ಪರಿಣಾಮ ಬಿರುತ್ತದೆ ಎಂದು ತಿಳಿಸಿದ್ದಾರೆ.

ಈ ಕಾರ್ಯದಲ್ಲಿ ಜಾಣೆ ಮತ್ತು ಪೋತೆಯರ ಕುಣಿತವಿರುತ್ತದೆ. ಮಹಿಳೆಯರ ಮೇಲೆ ಹೆಚ್ಚಿನ ವ್ಯಾಮೋಹ ಉಂಟುಮಾಡುವ ಈ ಸಂಪ್ರಾದಾಯವನ್ನು ಕೂಡಲೇ ಸಂಪೂರ್ಣವಾಗಿ ತಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಮುಂಬರುವ ದಿನಗಳಲ್ಲಿ ಯಾವುದೇ ಹಳ್ಳಿಯಲ್ಲಿ ಈ ಸಂಪ್ರಾದಾಯ ನಡೆದರೆ ಅದಕ್ಕೆ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಯವರೇ ಮುಖ್ಯ ಕಾರಣರಾಗುತ್ತಾರೆ. ಒಂದು ವೇಳೆ ಈ ಅನಿಷ್ಠ ಪದ್ಧತಿ ತಡೆಯದೇ ಇದ್ದರೆ ರಸ್ತೆ ತಡೆ ಮಾಡುವ ಮೂಲಕ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೈಜಿನಾಥ್ ಸಿಂಧೆ, ಉಪಾಧ್ಯಕ್ಷ ಶಿವಾನಂದ್ ಕಟ್ಟಿಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಕುಮಾರ್ ಭೋಲಾ, ತಾಲ್ಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ, ಯುವರಾಜ್ ಐಹೊಳ್ಳಿ, ಸಿದ್ದಾರ್ಥ್ ಜಾನವಿರ್, ಅನಂತ್ ಮಾಳಗೆ, ವಿಶಾಲ್ ಸಿಂಧನಕೇರಾ, ಗೌತಮ್ ಜಾನವಿರ್, ವಿಠಲ್ ಶಿವನಾಯಕ್, ಸಿದ್ದಾರ್ಥ್ ಡಾಂಗೆ, ರಾಹುಲ್, ಅರ್ಜುನ್ ಡಾಂಗೆ, ಶಿವಕುಮಾರ್, ದಶರಥ್ ದಂಡೆಕರ್ ಹಾಗೂ ಮನೋಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

31/01/2025 07:20 pm

Cinque Terre

1.98 K

Cinque Terre

0

ಸಂಬಂಧಿತ ಸುದ್ದಿ