ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್ : ಕುಂಭಮೇಳಕ್ಕೆ ತೆರಳಿರುವವರ ವಿವರ ನೀಡಲು ಜಿಲ್ಲಾಧಿಕಾರಿ ಶಿಲ್ಪಾ ಮನವಿ

ಬೀದರ್ : ಜಿಲ್ಲೆಯಿಂದ ಕುಂಭಮೇಳಕ್ಕೆ ತೆರಳಿರುವ ಹಾಗೂ ಕುಂಭಮೇಳಕ್ಕೆ ತೆರಳಿ ಯಾರಾದರೂ ಕಾಣೆಯಾಗಿದ್ದಲ್ಲಿ ಅವರ ವಿವರ ನೀಡಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗರಾಜ್ ನಗರದಲ್ಲಿ ಕುಂಭಮೇಳ ನಡೆಯುತ್ತಿದ್ದು, ಅದರಲ್ಲಿ ಮೌನಿ ಅಮವಾಸ್ಯದ ದಿನ ಜ.29 ರಂದು ಬೆಳಗಿನ ಜಾವ ತ್ರಿವೇಣಿ ಸಂಗಮ ತೀರದಲ್ಲಿ ಕಾಲ್ತುಳಿತದಿಂದ ಜನ ಮರಣ ಹೊಂದಿದ್ದಾರೆ. ಹಾಗೆಯೇ ಕೆಲವು ಜನ ಗಾಯಗೊಂಡಿದ್ದಾರೆ ಎಂಬ ಬಗ್ಗೆಯೂ ಸುದ್ದಿ ಮಾಧ್ಯಮಗಳಿಂದ ತಿಳಿದು ಬಂದಿದೆ. ಹಾಗಾಗಿ ಜಿಲ್ಲೆಯ ಸಾರ್ವಜನಿಕರು ಹಾಗೂ ಭಕ್ತರು ಕುಂಭಮೇಳಕ್ಕೆ ತೆರಳಿದ್ದಲ್ಲಿ ಹಾಗೂ ಕಾಣೆಯಾಗಿ ಸಂಪರ್ಕ ಸಾಧಿಸದೇ ಇದ್ದಲ್ಲಿ ಅಂತವರ ಸಂಬಂಧಿಕರು ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ: 88848 38404 ಹಾಗೂ 99862 86973 ಗೆ ಸಂಪರ್ಕಿಸಿ ವಿವರ ನೀಡುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

29/01/2025 09:52 pm

Cinque Terre

1.64 K

Cinque Terre

0

ಸಂಬಂಧಿತ ಸುದ್ದಿ