ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್ : ಬಸ್ ಕಂಡಕ್ಟರ್ ಮೇಲೆ ಯುವಕನಿಂದ ಹಲ್ಲೆ - ಪ್ರಕರಣ ದಾಖಲು

ಬೀದರ್: ಬಸ್ ಕಂಡಕ್ಟರ್ ಮೇಲೆ ಯುವಕ ಹಲ್ಲೆನೊಬ್ಬ ಹಲ್ಲೆ ಮಾಡಿದ ಘಟನೆ ಭಾಲ್ಕಿ ತಾಲ್ಲೂಕಿನ ಜೋಳದಾಪಕಾ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.

ಶಶಿಕಾಂತ್ ದುಬಲಗುಂಡೆ (49) ಗಾಯಗೊಂಡ ಬಸ್ ಕಂಡಕ್ಟರ್ ಆಗಿದ್ದಾರೆ.

ಇಂದು ಮುಂಜಾನೆ ನೀಲಮನಳ್ಳಿ, ಜೋಳದಾಪಕಾ ಮಾರ್ಗವಾಗಿ ಬಸ್ ಭಾಲ್ಕಿ ಕಡೆಗೆ ಸಾಗುತಿತ್ತು. ಜೋಳದಾಪಕಾ ಗ್ರಾಮದಲ್ಲಿ ಪ್ರಯಾಣಿಕರನ್ನು ತುಂಬಿಸಿಕೊಂಡು ಹೊರಡುವಾಗ ಬಸ್ಸನ್ನು ನಿಲ್ಲಿಸುವುದಕ್ಕಾಗಿ ಯುವಕನೊಬ್ಬ ಕೈಯಿಂದ ಬಸ್‌ಗೆ ಬಡಿದಿದ್ದಾನೆ. ಬಡಿದ ತಕ್ಷಣ ಬಸ್ಸು ನಿಲ್ಲಿಸಿದಾಗ, ಬಸ್‌ನಲ್ಲಿ ಬಂದ ಯುವಕ ಕಂಡಕ್ಟರ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ಪ್ರಕಾರಣ ತಿಳಿದ ನಂತರ ಭಾಲ್ಕಿ ಬಸ್ಸು ನಿಲ್ದಾಣದಲ್ಲಿ ಕೆಲ ಹೊತ್ತು ಬಸ್ಸು ಡ್ರೈವರ್ ಮತ್ತು ಕಂಡಕ್ಟರ್ ಒಗ್ಗೂಡಿ ಕೆಲ ಹೊತ್ತು ಪ್ರತಿಭಟನೆ ನಡೆಸಿದ್ದರು. ಗಾಯಗೊಂಡಿದ್ದ ಶಶಿಕಾಂತ್ ಅವರನ್ನು ಭಾಲ್ಕಿಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಧನ್ನುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

04/02/2025 10:35 pm

Cinque Terre

23.98 K

Cinque Terre

1

ಸಂಬಂಧಿತ ಸುದ್ದಿ