ಬೀದರ್ : ಪೂರ್ಣಕಾಲಿಕ ಹಾಗೂ ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಯ ನೇರ ಸಂದರ್ಶನವನ್ನು ಫೆಬ್ರವರಿ 6 ರಂದು ನಡೆಯಲಿದ್ದು, ಅರ್ಜಿ ಆಹ್ವಾನಿಸಲಾಗಿದೆ ಎಂದು ಎಂದು ಬೀದರ್ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ಸ್ನಾತಕೋತ್ತರ ವಿಷಯಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಿಗೆ ಹೆಚ್ಚುವರಿ ಬೋಧನಾ ಕಾರ್ಯದ ನಿರ್ವಹಣೆಗಾಗಿ UGC ನಿಯಮಾವಳಿಯ ಪ್ರಕಾರ ಪಿ.ಎಚ್.ಡಿ/ನೆಟ್/ಸೆಟ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಮಾತ್ರ 2024-25 ನೇ ಶೈಕ್ಷಣಿಕ ಸಾಲಿನ ಪೂರ್ಣಕಾಲಿಕ/ಅರೆಕಾಲಿಕ ಅತಿಥಿ ಉಪನ್ಯಾಸಕರ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಆಸಕ್ತ ಅಭ್ಯರ್ಥಿಗಳು ಮೂಲ ಅಗತ್ಯ ಶೈಕ್ಷಣಿಕ ದಾಖಲಾತಿಗಳು ಮತ್ತು ಸೇವಾ ದಾಖಲಾತಿಗಳೊಂದಿಗೆ ಒಂದು ದೃಢೀಕೃತ ಪ್ರತಿ ಸಹಿತ ಫೆ. 6 ರ ಬೆಳಿಗ್ಗೆ 10:00 ಗಂಟೆಗೆ ಬೀದರ್ ವಿಶ್ವವಿದ್ಯಾಲಯ, ಬೀದರ್, ಹಾಲಹಳ್ಳಿ (ಕೆ) ಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಲು ಅವರು ತಿಳಿಸಿದ್ದಾರೆ.
Kshetra Samachara
01/02/2025 06:35 pm