ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರೇಗಾ ಕಾಮಗಾರಿಯಲ್ಲಿ ಪರಿಸರ ರಕ್ಷಣೆಗೆ ಒತ್ತು ನೀಡಬೇಕು : ಸುದೇಶ ದೊಡ್ಡಿ

ಬೀದರ್ : ನಾವೆಲ್ಲರೂ ಆರೋಗ್ಯವಂತರಾಗಿ ಇರಬೇಕು ಎಂದರೆ ನಮ್ಮ ಸುತ್ತಮುತ್ತಲಿನ ವಾತಾವರಣ ಚೆನ್ನಾಗಿರಬೇಕು. ಅಂದಾಗ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ ಆದ್ದರಿಂದ ನರೇಗಾ ಕಾಮಗಾರಿಯಲ್ಲಿ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ಸುದೇಶ ಕೊಡ್ಡೆ ಹೇಳಿದರು.

ಅವರು ರವಿವಾರ ಜನವಾಡದಲ್ಲಿ ಆಯೋಜಿಸಿದ ನರೇಗಾ ದಿವಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕೇವಲ ಕೂಲಿಗಾಗಿ ಕೆಲಸ ಮಾಡದೆ. ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಹೇಳಿದರು.

ಜನವಾಡ ಪಿಡಿಓ ಅನಿಲಕುಮಾರ ಮಾತನಾಡಿ, ಎಲ್ಲರೂ ನರೇಗಾ ಯೋಜನೆ ಲಾಭ ಪಡೆಯಬೇಕು. ನರೇಗಾ ಯೋಜನೆಯಡಿ ದನದ ಕೊಟ್ಟಿಗೆ, ಹೋಂಡಾ ನಿರ್ಮಾಣ, ಸೇರಿದಂತೆ ಇತರೆ ಕಾಮಗಾರಿ ತೆಗೆದುಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೈಜಯಂತಿ ಬಾಯಿ, ಉಪಾಧ್ಯಕ್ಷ ತುಕರಾಮ, ತಾಂತ್ರಿಕ್ ಸಂಯೋಜಕವಿಷ್ಣು ಕುಲಕರ್ಣಿ, ಕಾಯಕ ಮಿತ್ರ ಸರಸ್ವತಿ, ಐಇಸಿ ಸಂಯೋಜಕ ಸತ್ಯಜೀತ ನೀಡೋದಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

02/02/2025 07:12 pm

Cinque Terre

1.7 K

Cinque Terre

0

ಸಂಬಂಧಿತ ಸುದ್ದಿ