ಬೀದರ್ : ಹಲವು ಅವ್ಯವಹಾರದಲ್ಲಿ ತೊಡಗಿದ ಜನವಾಡಾದ ಉಪ ತಹಶೀಲ್ದಾರ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹ ಸಮಿತಿಯು ಒತ್ತಾಯ ಮಾಡಿದೆ.
ಶುಕ್ರವಾರ, ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಈ ಭ್ರಷ್ಟ ಅಧಿಕಾರಿ ವಿರುದ್ಧ 2024 ರಲ್ಲಿ ಮುಖ್ಯಮಂತ್ರಿಗಳಿಗೆ ಸುಮಾರು 30 ಪುಟ್ಟಗಳಷ್ಟು ದೂರನ್ನು ಸಲ್ಲಿಸಿದ್ದೇವೆ. ಆದರೆ ಅವರ ವಿರುದ್ಧ ಯಾವುದೇ ರೀತಿಯ ಕ್ರಮಕೈಗೊಂಡಿರುವುದಿಲ್ಲ ಎಂದು ದೂರಿದ್ದಾರೆ.
ಉಪ ತಹಸೀಲ್ದಾರ್ ಅವರು ವಿಧವಾ ವೇತನ, ಇಂದೀರಾಗಾಂಧಿ, ಸಂಧ್ಯಾ ಸುರಕ್ಷಾ, ಅಂಗವೀಕಲರ ವೇತನ, ವಂಶವಳಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು ಅರ್ಜಿಯನು ಸಲ್ಲಿಸಿದರೆ, ಸಾರ್ವಜನಿಕರಿಗೆ ಇಲ್ಲ ಸಲ್ಲದ ಕಾರಣ ನೀಡಿ ಅರ್ಜಿಯನ್ನು ತೀರಸ್ಕರಿಸುತ್ತಿದ್ದರು. ಈ ಕುರಿತು ಇವರ ವಿರುದ್ಧ ಹಲವು ಸಂಘಟನೆಗಳು 2023 ರಲ್ಲಿ ಅರೆ ಬೆತ್ತಲೆ ಹೋರಾಟ ಹಾಗೂ 2024 ರಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಅಷ್ಟಾದರೂ ಕೂಡ ಇವರ ಮೇಲೆ ಯಾವುದೇ ರೀತಿಯ ಕಾನೂನಾತ್ಮಕ ಕ್ರಮ ಕೈಗೊಂಡಿಲ್ಲ. ಹಾಗಾಗಿ ಇವರಿಗೆ ಮೇಲಾಧಿಕಾರಿಗಳು ಕುಮ್ಮಕು ನೀಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆರೋಪಿಸಿದ್ದಾರೆ.
ಈ ವಿಷಯವನ್ನು ಗಂಬೀರವಾಗಿ ಪರಿಗಣಿಸಿ, ತಕ್ಷಣವೇ ಇವರ ವಿರುದ್ಧ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹ ಸಮಿತಿಯ ಜಿಲ್ಲಾಧ್ಯಕ್ಷ ವಿಶಾಲ್ ದೊಡ್ಡಿ, ಈಶ್ವರಸಿಂಗ್ ಠಾಕೂರ್, ಸಂಗಮೇಶ್ ಭಾವಿದೊಡ್ಡಿ, ವೆಂಕಟ ವಡೆಯರ್, ಪುಟ್ಟು ಚತುರೆ ಗಾದಗಿ, ರಜಿನಿಕಾಂತ್, ಮೀಲಿಂದ್ ರಾಜಗೀರಾ, ಎಮ್.ಡಿ ಅನ್ವರ್ ಷಾ ಉಪಸ್ಥಿತರಿದ್ದರು.
Kshetra Samachara
01/02/2025 06:31 pm