", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1738743422-WhatsApp-Image-2025-02-05-at-1.46.04-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shashikumar Hassan" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾಸನ :ಸಿದ್ದರಾಮಯ್ಯನವರು ನವಂಬರ್ ಅಂತ್ಯದ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬಹುದು. ತದನಂತರ ಡಿಕೆಶಿ ಅಥವಾ ಪರಮೇಶ್ವರ್ ಇಬ್ಬರಲ್ಲಿ ಯಾರು ಸಿಎಂ ಆಗ...Read more" } ", "keywords": "Karnataka Politics, Siddaramaiah, DK Shivakumar, Congress Party, Karnataka Chief Minister, Indian National Congress, State Politics, Karnataka News, Indian Politics, R Ashok Prediction, November Deadline.,Hassan,Politics", "url": "https://publicnext.com/node" } ಹಾಸನ: ಸಿದ್ದರಾಮಯ್ಯನವರು ನವೆಂಬರ್ ಅಂತ್ಯದ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬಹುದು- ಆರ್. ಅಶೋಕ ಭವಿಷ್ಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಸಿದ್ದರಾಮಯ್ಯನವರು ನವೆಂಬರ್ ಅಂತ್ಯದ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬಹುದು- ಆರ್. ಅಶೋಕ ಭವಿಷ್ಯ

ಹಾಸನ :ಸಿದ್ದರಾಮಯ್ಯನವರು ನವಂಬರ್ ಅಂತ್ಯದ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬಹುದು. ತದನಂತರ ಡಿಕೆಶಿ ಅಥವಾ ಪರಮೇಶ್ವರ್ ಇಬ್ಬರಲ್ಲಿ ಯಾರು ಸಿಎಂ ಆಗುತ್ತಾರೋ ಗೊತ್ತಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಕೇರಳ ರಾಜ್ಯದ ರೀತಿ ನಮ್ಮ ರಾಜ್ಯವು ಪಾಪರ್ ಚೀಟಿ ತೆಗೆದುಕೊಳ್ಳುವ ಸಮಯ ಹತ್ತಿರವಾಗುತ್ತಿದೆ. ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಸರ್ಕಾರ ದಿವಾಳಿಯತ್ತ ಸಾಗಿರುವುದೇ ಸ್ಪಷ್ಟ ಕಾರಣ. ನಮ್ಮ ಸರ್ಕಾರದಲ್ಲಿ ನಿಗಮಗಳಿಗೆ ಸರಿಸುಮಾರು 2000 ಕೋಟಿ ಅಷ್ಟು ಹಣ ನೀಡಿದ್ದು, ಕಾಂಗ್ರೆಸ್ ಸರ್ಕಾರ ಕೇವಲ 600 ಕೋಟಿ ಮಾತ್ರ ಸಾಲ ನೀಡಿದೆ ಎಂದು ಕೆಲವು ಅಂಕಿ-ಅಂಶಗಳನ್ನು ಪತ್ರಕರ್ತರ ಮುಂದೆ ಬಿಚ್ಚಿಟ್ಟರು.

ಮೈಕ್ರೋ ಫೈನಾನ್ಸ್ಗಳಲ್ಲಿ ಅತೀ ಹೆಚ್ಚು ಸಾಲ ಪಡೆಯುತ್ತಿರುವುದು ಹಿಂದುಳಿದ ಹಾಗೂ ದಲಿತ ಸಮುದಾಯದವರು. ಹೀಗಾಗಿ ಹೆಚ್ಚು ಬಡ್ಡಿ ಕಟ್ಟಲಾಗದೇ ಅವರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಅಭಿವೃದ್ಧಿ ನಿಗಮಗಳಿಗೆ ಕಾನೂನು ಬದ್ಧವಾಗಿ ಹಣ ಬಿಡುಗಡೆ ಮಾಡಿದರೆ ನಿಗಮಗಳು ತಮ್ಮ ತಮ್ಮ ಸಮಾಜಕ್ಕೆ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ಸಹಾಯದ ಜೊತೆಗೆ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸಾಲ ಸೌಲಭ್ಯ ನೀಡುತ್ತದೆ. ಹೀಗಾಗಿ, ಕೂಡಲೇ ಸರ್ಕಾರ ಕನಿಷ್ಠ 5000 ಕೋಟಿಯನ್ನ ಆದರೂ ಶೀಘ್ರ ಬಿಡುಗಡೆ ಮಾಡಿ, ಫೈನಾನ್ಸ್ ಹಾವಳಿಯನ್ನು ತಡೆಗಟ್ಟುವಲ್ಲಿ ಮುಂದಾಗಬೇಕು ಎಂದು ಆರ್ ಅಶೋಕ್ ಸಲಹೆ ನೀಡಿದರು.

Edited By : Shivu K
PublicNext

PublicNext

05/02/2025 01:47 pm

Cinque Terre

8.91 K

Cinque Terre

1

ಸಂಬಂಧಿತ ಸುದ್ದಿ