", "articleSection": "Politics,Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/229640-1738492612-hdk.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shashikumar Hassan" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚನ್ನರಾಯಪಟ್ಟಣ : ಬಜೆಟ್‌ನಲ್ಲಿ ಯೋಜನೆ, ಅನುದಾನ ಬರದೇ ಇರಬಹುದು. ಆದರೆ ಹಾಸನ ವಿಮಾನ ನಿಲ್ದಾಣ ವಿಚಾರವನ್ನು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿದ...Read more" } ", "keywords": "Hassan Airport, Airport Development, Karnataka Infrastructure, Indian Aviation, Airport Construction, HD Kumaraswamy, Karnataka Politics, Central Government Aid, Airport Expansion, Hassan District, Karnataka News, Aviation News, Indian Airports, Airport Projects ,Hassan,Politics,Infrastructure,Government", "url": "https://publicnext.com/node" }
ಚನ್ನರಾಯಪಟ್ಟಣ : ಬಜೆಟ್‌ನಲ್ಲಿ ಯೋಜನೆ, ಅನುದಾನ ಬರದೇ ಇರಬಹುದು. ಆದರೆ ಹಾಸನ ವಿಮಾನ ನಿಲ್ದಾಣ ವಿಚಾರವನ್ನು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿದ್ದೇನೆ. ಅಲ್ಲಿಂದಲೇ ಹೆಚ್ಚಿನ ನೆರವು ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಈಗ ರಾಜ್ಯ ಸರ್ಕಾರ ಸ್ಪಂದಿಸಬೇಕು, ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಯೋಜನೆ ಹಾಸನದ ಜನರ ಓಡಾಟಕ್ಕಾಗಿ ಅಲ್ಲ, ರೈತರ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ಏರ್ ಕಾರ್ಗೋ ಮೂಲಕ ರಫ್ತು ಮಾಡಿ, ರೈತರ ಆರ್ಥಿಕ ಶಕ್ತಿ ಸದೃಢಗೊಳಿಸಲು ಯೋಜಿಸಲಾಗಿದೆ. ಇದು ದೇವೇಗೌಡರ ಕನಸು ಎಂದರು.
“ಇಪ್ಪತ್ತೈದು ವರ್ಷಗಳಿಂದ ದೇವೇಗೌಡರಿಗೆ ಇದೇ ಚಿಂತೆ. ಆದರೆ ಇದನ್ನು ನಿಭಾಯಿಸಲು ರಾಜ್ಯ ಸರ್ಕಾರ ಎಷ್ಟು ಬೆಂಬಲ ನೀಡುತ್ತಿದೆ ಎಂಬುದು ಮುಖ್ಯ” ಎಂದು ಅವರು ಹೇಳಿದರು.
PublicNext
02/02/2025 04:07 pm