ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : "ಜಿ.ಟಿ.ದೇವೇಗೌಡ್ರು ಹೊಗಳೋದು, ಬೈಯ್ಯೋದು ಎಷ್ಟೊತ್ತು? ತಲೆ ಕೆಡಿಸಿಕೊಳ್ಳಬೇಕಿಲ್ಲ" ಎಂದ ಎಚ್ ಡಿಕೆ

ಚನ್ನರಾಯಪಟ್ಟಣ: ಜಿ.ಟಿ.ದೇವೇಗೌಡರು ಹೊಗಳೋದು ಎಷ್ಟೊತ್ತು? ಬೈಯ್ಯೋದು ಎಷ್ಟೊತ್ತು?ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಚನ್ನರಾಯಪಟ್ಟಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರ ಅಸಮಾಧಾನ ಕುರಿತಾಗಿ ಪ್ರತಿಕ್ರಿಯಿಸಿದರು. ನಾನು ಅವರನ್ನು ಹದಿನೈದು ವರ್ಷಗಳಿಂದ ನೋಡುತ್ತಿದ್ದೇನೆ. ಅವರು ಹೊಗಳೋದು ಎಷ್ಟೊತ್ತು? ಬೈಯ್ಯೋದು ಎಷ್ಟೊತ್ತು? ಇದರಲ್ಲಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಅವರಿಗೆ ವೈಯಕ್ತಿಕ ಸಮಸ್ಯೆಗಳಿರಬಹುದು. ಆದರೆ, ಅದು ಪಕ್ಷದ ಸಮಸ್ಯೆಯಲ್ಲ. ಅವರ ಅಸಮಾಧಾನ ವೈಯಕ್ತಿಕವಾಗಿ ಇರಬಹುದು, ಪರ್ಸನಲ್ ಅಜೆಂಡಾ ಇರಬಹುದು ಎಂದೂ ಹೇಳಿದರು. ನಮ್ಮ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ, ಗೊಂದಲಗಳಿಲ್ಲ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದರು. ಬೇರೆ ಪಕ್ಷದ ಗೊಂದಲದ ಬಗ್ಗೆ ನಾನು ಉತ್ತರ ನೀಡುವುದು ತಪ್ಪು. ಬಿಜೆಪಿ ಹೈಕಮಾಂಡ್ ಇದೆ, ಅವರು ಸರಿಪಡಿಸಿಕೊಳ್ಳುತ್ತಾರೆ ಎಂದು ಬಿಜೆಪಿ ಒಳಜಗಳದ ಬಗ್ಗೆ ಮಾತನಾಡಲು ನಿರಾಕರಿಸಿದರು.

Edited By : Shivu K
PublicNext

PublicNext

02/02/2025 04:27 pm

Cinque Terre

26.7 K

Cinque Terre

0

ಸಂಬಂಧಿತ ಸುದ್ದಿ