", "articleSection": "Politics,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738741262-V2~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ : ಈ ಹಿಂದೆ ರಾಯಣ್ಣ ಬ್ರಿಗೇಡ್ ಆರಂಭಿಸಿ ಬಿಜೆಪಿಗೆ ಸಡ್ಡು ಹೊಡೆದಿದ್ದ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ಈಗ ‘ಕ್ರಾಂತಿ ವ...Read more" } ", "keywords": "K.S. Eshwarappa, KS Eshwarappa, Eshwarappa ex minister, Karnataka ex minister, KS Eshwarappa BJP, Eshwarappa politician, Karnataka politics, KS Eshwarappa news, Eshwarappa updates, Karnataka BJP, KS Eshwarappa latest, Eshwarappa Karnataka government.,Bijapur,Politics,News,Public-News", "url": "https://publicnext.com/node" }
ವಿಜಯಪುರ : ಈ ಹಿಂದೆ ರಾಯಣ್ಣ ಬ್ರಿಗೇಡ್ ಆರಂಭಿಸಿ ಬಿಜೆಪಿಗೆ ಸಡ್ಡು ಹೊಡೆದಿದ್ದ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ಈಗ ‘ಕ್ರಾಂತಿ ವೀರ ಬ್ರಿಗೇಡ್’ ಸಂಘಟನೆ ಉದ್ಘಾಟಿಸುವ ಮೂಲಕ ಮತ್ತೊಮ್ಮೆ ಕೇಸರಿ ಪಕ್ಷಕ್ಕೆ ಸಡ್ಡು ಹೊಡೆದಿದ್ದಾರೆ.
ಹೌದು!ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಮಾಜಿ ಡಿಸಿಎಂ ಕೆ,ಎಸ್ ಈಶ್ವರಪ್ಪ ನವರ ನೇತೃತ್ವದಲ್ಲಿ 1008 ಸಾದು ಸಂತರ ಪಾದ ಪೂಜೆಯೊಂದಿಗೆ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೊಂಡಿದೆ.
ಕ್ರಾಂತಿ ಪುರುಷ ಬಸವಣ್ಣನವರ ಜನ್ಮಸ್ಥಳವಾದ ಬಸವನ ಬಾಗೇವಾಡಿ ಪಟ್ಟಣದಲ್ಲಿ ಬಸವೇಶ್ವರ ದೇವಸ್ಥಾನದಿಂದ ಬೃಹತ್ ಕುಂಭ ಹೊತ್ತ ಮಹಿಳೆಯರು ಮೆರವಣಿಗೆ ಮೂಲಕ ಕಾರ್ಯಕ್ರಮದ ವೇದಿಕೆಗೆ ಆಗಮಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ಹೇರಿ ಶ್ರೀಗಳು ಈಶ್ವರಪ್ಪ ನವರ ತೆಗೆದುಕೊಂಡ ನಿರ್ಧಾರ ಒಳ್ಳೆಯ ನಿರ್ಧಾರ, ಈಶ್ವರಪ್ಪ ನವರ ಜೊತೆ ಸ್ವಾಮಿಗಳು ಸದಾಕಾಲ ಇರುತ್ತೇವೆ ಎಂದು ಹೇಳಿದರು.
ಬಸವನ ಬಾಗೇವಾಡಿ ಪಟ್ಟಣದ ಗುರುಕೃಪಾ ಶಾಲೆಯ ಪಕ್ಕದ ಆವರಣದಲ್ಲಿ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೃಹತ್ ವೇದಿಕೆಯ ಮೇಲೆ ಈಶ್ವರಪ್ಪ ದಂಪತಿಗಳು ಕನ್ಹೇರಿ ಮಠದ ಅದೃಶ್ಯ ಕಾಡ ಸಿದ್ದೇಶ್ವರ ಸ್ವಾಮಿಜಿಗಳ ಪಾದ ಪೂಜೆ ನಡೆಸಿದರು. ಬಳಿಕ ಕ್ರಾಂತಿ ವೀರ ಬ್ರಿಗೇಡ್ ಲಾಂಚನ್ ಉದ್ಘಾಟನೆ ಮಾಡಲಾಯಿತು. ಬಳಿಕ ಜ್ಯೋತಿ ಬೆಳಗಿಸುವ ಮೂಲಕ ಕ್ರಾಂತಿ ವೀರ ಬ್ರಿಗೇಡ್ ಉದ್ಘಾಟನೆ ಮಾಡಲಾಯಿತು.
ಇನ್ನೂ ಇದೇ ವೇಳೆ ವೇದಿಕೆ ಮೇಲೆ ಮಾತನಾಡಿದ ಕೆ ಎಸ್ ಈಶ್ವರಪ್ಪ ಇಲ್ಲಿ ಕುಳಿತಿರುವ ಸ್ವಾಮಿಜಿಗಳ ಉದ್ದೇಶ ನಾವು ಜಾತಿ ಮಾಡಲ್ಲ, ಧರ್ಮವನ್ನು, ದೇಶವನ್ನು ಉಳಿಸಲು ಬಂದಿದ್ದೇವೆ ಎಂಬುದಾಗಿದೆ ಎಂದರು.
ಸದ್ಯ ಅಪಾರ ಜನಸ್ತೋಮದೊಂದಿಗೆ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೊಂಡಿದೆ .ಈ ಹಿಂದೆ ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಹುಟ್ಟು ಹಾಕಿದ ಈಶ್ವರಪ್ಪ ನವರು ಅದನ್ನು ಕೈ ಬಿಟ್ಟಿದ್ದಾರೆ ಆದರೆ ಈಗ ಬಸವ ಜನ್ಮಸ್ಥಳದಲ್ಲಿ ಕ್ರಾಂತಿವೀರ ಬ್ರಿಗೇಡ್ ಹುಟ್ಟಿ ಹಾಕಿದ್ದಾರೆ. ಈ ಬ್ರಿಗೇಡ್ ಮುಂಬರುವ ದಿನಗಳಲ್ಲಿ ಹೊಸ ಯೋಜನೆಗಳೊಂದಿಗೆ ಮುಂದುವರೆಯುತ್ತಾ ಅಥವಾ ರಾಯಣ್ಣ ಬ್ರಿಗೇಡ್ ತರಹ ಅರ್ಧಕ್ಕೆ ನಿಲ್ಲುತ್ತಾ ಎಂಬುದನ್ನು ಕಾದು ನೊಡಬೇಕಿದೆ.
ಮಂಜು ಕಲಾಲ ಪಬ್ಲಿಕ ನೆಕ್ಸ್ಟ್ ವಿಜಯಪುರ
PublicNext
05/02/2025 01:11 pm