ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಕೇಂದ್ರ‌ ಬಜೆಟ್ ರಾಜ್ಯದ ಜನರಿಗೆ ಅನ್ಯಾಯ ಮಾಡಿದೆ- ಸಚಿವ ಶಿವಾನಂದ ಪಾಟೀಲ

ವಿಜಯಪುರ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿರುವ ಬಜೆಟ್ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ‌

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಕೇಂದ್ರ ಬಜೆಟ್ ಗೆ ಪ್ರತಿಕ್ರಿಯಿಸಿದ ಅವರು, ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕ ರಾಜ್ಯಕ್ಕೆ ಕೇಂದ್ರದ ಬಜೆಟ್ ಏನನ್ನೂ ಕೊಟ್ಟಿಲ್ಲ. ರಾಜ್ಯದ ನೀರಾವರಿಗೆ, ಕೃಷಿಗೆ ಆದ್ಯತೆ ಸಿಕ್ಕಿಲ್ಲ. ರೈತರಿಗೆ ಸಾಲ ಕೊಡುವ ನಬಾರ್ಡ್ ನೆರವು ಕಡಿಮೆ ಮಾಡಲಾಗಿದೆ. ಹೆಚ್ಚಿನ ತೆರಿಗೆ ಕೊಡುವ ರಾಜ್ಯಗಳಿಗೆ ಉತ್ತೇಜನ ನೀಡಿಲ್ಲ. ಬ್ರಾಡ್‌ ಗೇಜ್, ವಿಮಾನ ನಿಲ್ದಾಣದ ಘೋಷಣೆ ಇಲ್ಲ. ಜಿ.ಎಸ್.ಟಿ. ಅತೀ ವೇಗದಲ್ಲಿ ಕಾರ್ಯಗತಗೊಳಿಸಿದ ರಾಜ್ಯದ ಜನರಿಗೆ ಅನ್ಯಾಯ ಮಾಡಿದೆ ಎಂದರು.

-ಮಂಜು ಕಲಾಲ, ಪಬ್ಲಿಕ ನೆಕ್ಸ್ಟ್ ವಿಜಯಪುರ

Edited By : Manjunath H D
PublicNext

PublicNext

01/02/2025 09:06 pm

Cinque Terre

37.66 K

Cinque Terre

0