", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1738645547-nambi.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ದುಬೈ ಕತಾರ್‌ನಲ್ಲಿ ಅರಳಿದ ಪ್ರೇಮ ಮೋಸದ ಆಟದಿಂದ ವಿಜಯಪುರದಲ್ಲಿ ಅಂತ್ಯಗೊಂಡು ಯುವತಿಯೊಬ್ಬಳ ಜೀವನ ಬೀದಿಪಾಲಾಗಿದೆ. ಹೌದು. ವಿಜಯಪ...Read more" } ", "keywords": "Vijayapura, Dubai, Qatar, Love Story, Tragic End, Interfaith Marriage, Honor Killing, Crime News, Karnataka News, Indian Society, Social Issues, Love Turns Deadly.,Bijapur,Crime,Law-and-Order", "url": "https://publicnext.com/node" }
ವಿಜಯಪುರ: ದುಬೈ ಕತಾರ್‌ನಲ್ಲಿ ಅರಳಿದ ಪ್ರೇಮ ಮೋಸದ ಆಟದಿಂದ ವಿಜಯಪುರದಲ್ಲಿ ಅಂತ್ಯಗೊಂಡು ಯುವತಿಯೊಬ್ಬಳ ಜೀವನ ಬೀದಿಪಾಲಾಗಿದೆ.
ಹೌದು. ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಆರೀಫ್ ಎಂಬಾತ ಆಂಧ್ರ ಪ್ರದೇಶದ ಚಿತ್ತಾಪುರ ಜಿಲ್ಲೆಯ ಶಾಹೀನ್ ಎಂಬ ಯುವತಿಗೆ ಪ್ರೀತಿಯ ಹೆಸರಿನಲ್ಲಿ ವಂಚಿಸಿ ಪರಾರಿಯಾಗಿದ್ದಾನೆ. ಶಾಹೀನ್ ಕಳೆದ ನಾಲ್ಕು ವರ್ಷಗಳಿಂದ ದುಬೈನ್ ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಆರೀಫ್ ಕೂಡ ಕೆಲಸಕ್ಕೆ ಮಾಡಿಕೊಂಡಿದ್ದ. ಅಲ್ಲಿ ಇಬ್ಬರಿಗೂ ಪರಿಚಯವಾಗಿ ನಂತರ ಪ್ರೇಮಾಂಕುರವಾಗಿ ಮೂರು ವರ್ಷ ಒಟ್ಟಿಗೆ ಸಂಸಾರ ನಡೆಸಿದ್ದಾರೆ. ನಂತರ ನಮ್ಮ ದೇಶಕ್ಕೆ ಹೋಗಿ ಸೆಟಲ್ ಆಗೋಣ ಅಂತ ಹೇಳಿ ಆರೀಫ್ ತಾಳಿಕೋಟೆಗೆ ಶಾಹೀನಳನ್ನ ಕರೆ ತಂದಿದ್ದಾನೆ. ನಂತರ ಆರೀಫ್ ಕುಟುಂಬಸ್ಥರ ಸಮ್ಮುಖದಲ್ಲಿ ಕಳೆದ ತಿಂಗಳು ಜನವರಿ 9 ರಂದು ಮದುವೆಯಾಗಿದ್ದಾನೆ. ಆದ್ರೆ ಮದುವೆಯಾದ 20 ದಿನದಲ್ಲೇ ಆರೀಫ್ ಹಾಗೂ ಆತನ ಕುಟುಂಬಸ್ಥರು ತಲಾಕ್ ಕೊಡಲು ಶಾಹೀನ್‌ಗೆ ಒತ್ತಾಯಿಸಿದರಂತೆ. ಅಲ್ಲದೆ ಶಾಹೀನ್ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ಬೇಸತ್ತ ಶಾಹೀನ್ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ. ಆಗ ಆರೀಫ್ ಶಾಹೀನ್ ಜೊತೆ ಸರಿಯಾಗಿ ಸಂಸಾರ ಮಾಡೊದಾಗಿ ಹೇಳಿ ಕರೆದುಕೊಂಡು ಬಂದಿದ್ದಾನೆ.
ನಂತರ ಆರೀಫ್ ಕೆಲ ದಿನ ಸರಿಯಾಗಿದ್ದು ಬಳಿಕ ಶಾಹೀನ್ ಮೇಲೆ ಹಲ್ಲೆ ಕೂಡ ಮಾಡಿದ್ದಾನಂತೆ. ನಂತರ ಇಬ್ಬರು ವಿಜಯಪುರದ ಬುರಣಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರಂತೆ. ಅಲ್ಲಿಯೂ ಕೂಡ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಆಗ ಆರೀಫ್ ತನ್ನ ಇಬ್ಬರು ಸಂಬಂಧಿಕರೊಂದಿಗೆ ಬಂದು ಚಾಕು ತೋರಿಸಿ, ಜೀವ ಬೆದರಿಕೆ ಹಾಕಿ ಶಾಹೀನ್ ಬಳಿ ಇದ್ದ ಹಣ, ಮೊಬೈಲ್ ಸೇರಿದಂತೆ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಸದ್ಯ ಶಾಹೀನ್ ಬೀದಿ ಪಾಲಾಗಿದ್ದು, ನನ್ನ ಗಂಡನನ್ನು ಹುಡುಕಿ ಕೊಡಿ ಅಂತ ವಿಜಯಪುರ ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ನನಗೆ ಹಾಗೂ ಸಂಬಂಧಿಕರಿಗೆ ಆರೀಫ್ ಮತ್ತು ಕುಟುಂಬಸ್ಥರು ಫೋನ್ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ನನಗೆ ಯಾರಿಂದಲೂ ನ್ಯಾಯ ಸಿಗದಿದ್ದರೆ ಆರೀಫ್ ಕುಟುಂಬಸ್ಥರು, ನನ್ನ ಮದುವೆ ಮಾಡಿಸಿದವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶಾಹೀನ್ ಎಚ್ಚರಿಕೆ ನೀಡಿದ್ದಾಳೆ
ಮಂಜು ಕಲಾಲ, ಪಬ್ಲಿಕ ನೆಕ್ಸ್ಟ ವಿಜಯಪುರ
PublicNext
04/02/2025 10:35 am