ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಕೊಲೆ ಮಾಡಿ ಶವವನ್ನ ಹೂತು ಹಾಕಲು ಯತ್ನಿಸಿದ ಆರೋಪಿಗಳು ಅಂದರ್...

ವಿಜಯಪುರ: ವಿಜಯಪುರ ನಗರದ ಬಸವನಗರ ನಿವಾಸಿ ಶಿವರಾಜ್ ಶಿರಾಳಶೆಟ್ಟಿ (34) ಎಂಬಾತನನ್ನು ಕೊಲೆ ಮಾಡಿ, ನಗರದ ಕೀರ್ತಿ ನಗರದ ಸ್ಮಶಾನದಲ್ಲಿ ಮುಚ್ಚಲು ಯತ್ನಿಸಿದ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.

ಶಿವರಾಜ ಶಿರಾಳಶೆಟ್ಟಿ (34) ಎಂಬಾತನಿಗೆ ಕುಡಿದ ಮತ್ತಿನಲ್ಲಿ ಯಾಸೀರ್ ಕನ್ನೂರ, ಶೇಖರ್ ಸೋನಾರ್ ಎಂಬಾತರು ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ್ದಾರೆ. ಮೊದಲಿಗೆ ಯಾಸೀರ್ ಹಾಗೂ ಮೃತ ಶಿವಾರಾಜ್ ಸಿಂದಗಿ ಬೈ ಪಾಸ್ ನ ಬಾರ್ ಒಂದರಲ್ಲಿ ಮದ್ಯ ಸೇವನೆ ಮಾಡಿ‌ ಗಲಾಟೆ ಮಾಡಿಕೊಂಡಿದ್ದಾರೆ.

ಬಳಿಕ ಮತ್ತೆ ಮದ್ಯವನ್ನು ಪಾರ್ಸಲ್ ತಂದು‌ ಕೀರ್ತಿ ನಗರದ ಸ್ಮಶಾನದ ಬಳಿ ಕುಡಿಯುತ್ತಾ ಕುಳಿತಿದ್ದಾರೆ. ಇಲ್ಲಿಗೆ ಇನ್ನೊಬ್ಬ ವ್ಯಕ್ತಿ ಶೇಖರ್‌ ಸೋನಾರ್ ಎಂಬಾತನು‌ ಬಂದು ಆತನೂ ಬಂದು‌ ಕುಡಿದಿದ್ದಾನೆ. ಇದೇ ವೇಳೆ ಶಿವರಾಜ್ ಹಾಗೂ ಯಾಸೀರ್ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಶಿವರಾಜ್ ತಲೆಗೆ ಕಲ್ಲಿನಿಂದ ಹೊಡೆದು ಯಾಸೀರ್ ಕೊಲೆ ಮಾಡಿದ್ದಾನೆ. ಬಳಿಕ ಯಾಸೀರ್ ಹಾಗೂ ಶೇಖರ್ ಸೋನಾರ್ ಸೇರಿಕೊಂಡು ಶವವನ್ನು ಸ್ಮಶಾನದಲ್ಲಿ ಹೂತು ಹಾಕಲು ಯತ್ನಿಸಿದ್ದಾರೆ.

ಇದನ್ನು ಗಮನಿಸಿದ ಕೆಲ ಸ್ಥಳೀಯರು ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೊದಲಿಗೆ ಶೇಖರ್ ನನ್ನು ವಶಕ್ಕೆ ಪಡೆದರೆ ತಲೆ ಮರೆಸಿಕೊಂಡಿದ್ದ ಯಾಸೀರ್ ನನ್ನು ಸಹಿತ ಬಂಧಿಸಿದ್ದಾರೆ...

ಇನ್ನೂ ಮೃತ ಶಿವರಾಜ್ ಶಿರಾಳಶೆಟ್ಟಿ ಬಸವನ ನಗರದಲ್ಲಿರುವ ಅಕ್ಕನ ಮನೆಯಲ್ಲಿ ಇದ್ದ. ಈತನ‌ ಹೆಂಡತಿ ಗಲಾಟೆ ಮಾಡಿ ಈತನನ್ನು ಬಿಟ್ಟು ಹೋಗಿದ್ದಳು.‌ ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಮನನೊಂದು ಆತ ಹೆಚ್ಚಾಗಿ‌ ಮದ್ಯ ಸೇವಿಸ್ತಾ ಇದ್ದ ಎಂದು ತಿಳಿದುಬಂದಿದೆ. ಆದರೆ ಮೃತನ ಹೆಂಡತಿ ಅಶ್ವಿನಿ ಮಾತ್ರ ತನ್ನ ಗಂಡನ ಸಾವಿಗೆ ಆತನ ಅಕ್ಕನೇ ಕಾರಣ ಎಂದು ಆರೋಪಿಸುತ್ತಿದ್ದಾಳೆ.

ಸದ್ಯ ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ. ಇನ್ನೂ ಮೃತ ಶಿವಾರಾಜ್ ಅಕ್ಕ ಹಾಗೂ ಆತನ ಹೆಂಡತಿ‌ ಆರೋಪ ಪ್ರತ್ಯಾರೋಪದ ಕುರಿತು ಕೂಡಾ ತನಿಖೆ ನಡೆಸುತ್ತಿದ್ದಾರೆ. ಇನ್ನೂ ಮುಂಬರುವ ದಿನಗಳಲ್ಲಿ ಈ ಪ್ರಕರಣ ಇನ್ಯಾವ ತಿರುವು ಪಡೆಯುತ್ತದೆ ಎನ್ನುವುದನ್ನ ಕಾದು ನೋಡಬೇಕಿದೆ...

- ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್, ವಿಜಯಪುರ

Edited By : Shivu K
PublicNext

PublicNext

30/01/2025 12:20 pm

Cinque Terre

23.56 K

Cinque Terre

0

ಸಂಬಂಧಿತ ಸುದ್ದಿ