", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1738222685-WhatsApp-Image-2025-01-30-at-1.07.55-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ನೀರಿನ ಬಾಟಲಿ ಅಂತ ತಿಳಿದು ಬಾಟಲಿಯಲ್ಲಿರೋ ಆಸಿಡ್ ಹಾಕಿ ಮದ್ಯ ಸೇವಿಸಿ ವ್ಯಕ್ತಿ ಮೃತಪಟ್ಟಿರುವ ಘಟನೆ ವಿಜಯಪುರ ನಗರದ ಎಲ್ ಬಿ ಎಸ್ ಮಾರ...Read more" } ", "keywords": " Vijayapura, Acid Attack, Alcohol Poisoning, Fatal Incident, Bar Owner, Waiter, Police Complaint, Karnataka News, Vijayapura News, Crime News.,Bijapur,Crime", "url": "https://publicnext.com/node" } ವಿಜಯಪುರ: ಆಸಿಡ್ ಹಾಕಿ ಮದ್ಯ ಸೇವಿಸಿದ ವ್ಯಕ್ತಿ ಸಾವು.! - ಬಾರ್ ಮಾಲೀಕ, ವೇಟರ್ ವಿರುದ್ಧ ದೂರು ದಾಖಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಆಸಿಡ್ ಹಾಕಿ ಮದ್ಯ ಸೇವಿಸಿದ ವ್ಯಕ್ತಿ ಸಾವು.! - ಬಾರ್ ಮಾಲೀಕ, ವೇಟರ್ ವಿರುದ್ಧ ದೂರು ದಾಖಲು

ವಿಜಯಪುರ: ನೀರಿನ ಬಾಟಲಿ ಅಂತ ತಿಳಿದು ಬಾಟಲಿಯಲ್ಲಿರೋ ಆಸಿಡ್ ಹಾಕಿ ಮದ್ಯ ಸೇವಿಸಿ ವ್ಯಕ್ತಿ ಮೃತಪಟ್ಟಿರುವ ಘಟನೆ ವಿಜಯಪುರ ನಗರದ ಎಲ್ ಬಿ ಎಸ್ ಮಾರ್ಕೆಟ್‌ನಲ್ಲಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಮಹಮ್ಮದ್ ಶಫೀಕ್ ಮನಿಯಾರ (48) ಎಂದು ಗುರುತಿಸಲಾಗಿದೆ. ಇನ್ನು ಮೃತ ಮಹಮ್ಮದ್ ಶಫೀಕ್ ಮನಿಯಾರ ವಿಜಯಪುರ ನಗರದ ಉಪ್ಪಲಿ ಬುರ್ಜ ನಿವಾಸಿಯಾಗಿದ್ದು, ಮದ್ಯ ಸೇವಿಸಲು ಎಲ್ ಬಿ ಎಸ್ ಮಾರ್ಕೆಟ್ ನಲ್ಲಿರುವ ಬಾರ್‌ಗೆ ತೆರಳಿದ್ದಾನೆ. ಮದ್ಯ ಸೇವಿಸುವ ವೇಳೆ ಬಾರ್ ಟೇಬಲ್ ಮೇಲೆ ಟೈಲ್ಸ್ ತೊಳೆಯಲು ಇಟ್ಟಿದ್ದ ಆಸಿಡ್ ಬಾಟಲಿಯನ್ನ ನೀರು ಎಂದು ತಿಳಿದು ಮದ್ಯದೊಂದಿಗೆ ಸೇವಿಸಿದ್ದಾನೆ. ನಂತರ ಹೊಟ್ಟೆ ಉರಿ ಎಂದು ಗೋಳಾಡಲು ಆರಂಭಿಸಿದ್ದಾನೆ. ಇದನ್ನು ಗಮನಿಸಿದ ಬಾರ್ ಸಿಬ್ಬಂದಿ ನೀನು ಆಸಿಡ್ ಕುಡಿದಿದ್ದಿಯಾ ಎಂದು ಹೇಳಿದ್ದಾನೆ.

ಬಳಿಕ ಮನೆಗೆ ತೆರಳಿ ಪತ್ನಿ ಬಳಿಯೂ ಹೇಳಿದ್ದಾನೆ. ಬಳಿಕ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನೆಗೆ ಬಾರ್ ಮಾಲೀಕ, ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಶವವಿಟ್ಟು ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಮೃತದೇಹ ತೆಗೆದುಕೊಂಡು ಅಂತ್ಯಕ್ರಿಯೆಗೆ ತೆರಳಿದರು.

ಈ ಕುರಿತು ಮೃತನ ಪತ್ನಿ ಶಾಹೀದಾರಿಂದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಬಾರ್ ಮಾಲೀಕ, ಮ್ಯಾನೇಜರ್, ವೇಟರ್ ವಿರುದ್ಧ ದೂರು ದಾಖಲಾಗಿದೆ.

ಮಂಜು ಕಲಾಲ, ಪಬ್ಲಿಕ ನೆಕ್ಸ್ಟ ವಿಜಯಪುರ

Edited By : Shivu K
PublicNext

PublicNext

30/01/2025 01:08 pm

Cinque Terre

25.61 K

Cinque Terre

0