ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬಸವರಾಜು ಹೊಸ ಜಿಲ್ಲಾಧಿಕಾರಿಯಾಗಿ ನೇಮಕ

ದೇವನಹಳ್ಳಿ : 2017ನೇ ಬ್ಯಾಚಿನ ಐಎಎಸ್‌ ಅಧಿಕಾರಿ ಎ.ಬಿ. ಬಸವರಾಜು ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬಸವರಾಜು ಅವರು ಈ ಹಿಂದೆ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಉಪ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಹಿಂದೆ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಎನ್‌. ಶಿವಶಂಕರ ಅವರನ್ನು ಜ.28 ರಂದು ವರ್ಗಾವಣೆ ಮಾಡಿ ಬೆಸ್ಕಾಂ ಎಂ.ಡಿಯಾಗಿ ನೇಮಿಸಲಾಗಿತ್ತು. ಇದೇ ಜಾಗಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್.ಅನುರಾಧ ಅವರನ್ನು ಪ್ರಭಾರ ಜಿಲ್ಲಾಧಿಕಾರಿಯಾಗಿ ಉಸ್ತುವಾರಿ ನೀಡಲಾಗಿತ್ತು.

ನೂತನ ಜಿಲ್ಲಾಧಿಕಾರಿಯಾಗಿ ಬಸವರಾಜು ಎ.ಬಿ ಅವರನ್ನು ನೇಮಿಸಿದ್ದು, ಹೆಚ್ಚುವರಿ ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ಜಿಪಂ ಸಿಇಒ ಕೆ.ಎನ್‌.ಅನುರಾಧ ಅವರನ್ನು ಆ ಸ್ಥಳದಿಂದ ಬಿಡುಗಡೆಗೊಳಿಸಿದೆ.

Edited By : Nirmala Aralikatti
PublicNext

PublicNext

04/02/2025 08:57 pm

Cinque Terre

49.8 K

Cinque Terre

0

ಸಂಬಂಧಿತ ಸುದ್ದಿ