ಬೆಂಗಳೂರು : ರಾಜ್ಯದ ಜನರಿಗೆ ಸರ್ವರ್ ಸಮಸ್ಯೆ ಇಂದ ಮತ್ತೆ ಋಣಭಾರ ಪ್ರಮಾಣಪತ್ರ ಪಡೆಯಲು ಸಮಸ್ಯೆ ಎದುರಾಗ್ತಾ ಇದೆ.
EC ಇಲ್ಲದೇ ಈ- ಖಾತಾ, ಆಸ್ತಿ ಖಾತೆ ಬದಲಾವಣೆ, ಮಾರಾಟ, ಅಡಮಾನ ಮಾಡಲಾಗದೇ ಜನರಿಗೆ ತೊಂದರೆ ಉಂಟಾಗುತ್ತಿದೆ. ಈ ಮಧ್ಯೆ ಫೆ.10ರೊಳಗೆ ಈ- ಖಾತಾ ಮಾಡಲು ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೂಚನೆ ಕೊಟ್ಟಿದ್ದು ECಗೆ ಅರ್ಜಿ ಸಲ್ಲಿಸಲು ಜನ ಮುಗಿ ಬಿದ್ದಿದ್ದಾರೆ.
ಸರ್ವರ್ ಡೌನ್ ಆಗಿದ್ದು ಕಾವೇರಿ ತತ್ರಾಂಶ ಕಾರ್ಯನಿರ್ವಹಿಸದ ಹಿನ್ನಲೆ ಮಾಲೀಕರಿಗೆ EC ಲಭ್ಯ ಆಗುತ್ತಿಲ್ಲ. ಕೆಲವು ದಿನಗಳ ಕಾಲ ಸರ್ವರ್ ಸರಿ ಆಗಿದ್ದು ಮತ್ತೆ ಈಗ ಸರ್ವರ್ ಕೈಕೊಟ್ಟಿದ್ರು ಕ್ಯಾರೇ ಅನ್ನದ ಅಧಿಕಾರಿಗಳ ವರ್ತನೆಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು ಸರ್ಕಾರಕ್ಕೆ ಹಿಡಿಶಾಪ ಹಾಕಿ ಸಾರ್ವಜನಿಕರು ತೆರಳುತ್ತಿದ್ದಾರೆ..
PublicNext
04/02/2025 05:45 pm