ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆರಿಗೆ ಪಾವತಿಸದೆ ಸಂಚಾರಿಸುತ್ತಿದ್ದ 30 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದ ಆರ್. ಟಿ. ಓ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ಐಷಾರಾಮಿ ಕಾರುಗಳನ್ನು ಆರ್ ಟಿ ಓ ಅಧಿಕಾರಗಳು ವರ್ಷಕ್ಕೆ ಪಡೆದುಕೊಂಡಿದ್ದಾರೆ. ಭಾನುವಾರ ಬೆಂಗಳೂರು ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಐಶಾರಾಮಿ ಕಾರುಗಳನ್ನು ಸೀಸ್ ಮಾಡಿದ್ದಾರೆ.

ಎಸ್ ರಾಜ್ಯದಲ್ಲಿ ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ಫೆರಾರಿ, ಪೋರ್ಷೆ, ಬಿಎಂಡಬ್ಲ್ಯು, ಬೆಂಜ್, ಆಡಿ, ಆಸ್ಟಿನ್, ರೇಂಜ್ ರೋವರ್ ಸೇರಿದಂತೆ 30 ಕಾರುಗಳನ್ನು ಆರ್ ಟಿ ಓ ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ಸಾರಿಗೆ ಇಲಾಖೆಯ ಉಪ ಆಯುಕ್ತ ಸಿ. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ನಡೆದಿದ್ದು 41 ಅಧಿಕಾರಿಗಳ ತಂಡ ಭಾಗಿಯಾಗಿತ್ತು.

ಇನ್ನು ಕಾರ್ಯಾಚರಣೆ ಬಳಿಕ ಕಾರಿನ ಮೌಲ್ಯ ಆಧರಿಸಿ ತೆರಿಗೆ ವಸುಲಿಗೆ ಆರ್ ಟಿ ಓ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ವಶಪಡಿಸಿಕೊಂಡ ಕಾರುಗಳಿಂದ ಮೂರು ಕೋಟಿಗೂ ಹೆಚ್ಚು ಟ್ಯಾಕ್ಸ್ ಬರಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

04/02/2025 05:39 pm

Cinque Terre

11.5 K

Cinque Terre

0

ಸಂಬಂಧಿತ ಸುದ್ದಿ