ವಾಷಿಂಗ್ಟನ್: ಎಲಾನ್ ಮಸ್ಕ್ ಅವರ ಸರಕಾರಿ ತಪಾಸಣಾ ತಂಡಕ್ಕೆ ನಿರ್ಬಂಧಿತ ಪ್ರದೇಶದಲ್ಲಿನ ಗೋಪ್ಯ ಕಡತಗಳನ್ನು ತೋರಿಸಲು ನಿರಾಕರಿಸಿದ ಅಧಿಕಾರಿಗಳನ್ನು ಅಮೆರಿಕ ಸರಕಾರ ರಜೆ ಮೇಲೆ ಕಳುಹಿಸಿದೆ.
ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕ ಏಜೆನ್ಸಿ (ಯುಎಸ್‌ಎಐಡಿ)ಯ ಇಬ್ಬರು ಭದ್ರತಾ ಮುಖ್ಯಸ್ಥರನ್ನು ರಜೆ ಮೇಲೆ ಕಳುಹಿಸಲಾಗಿದೆ. ಈ ಮೂಲಕ ಸರ್ಕಾರಿ ದಕ್ಷತಾ ಇಲಾಖೆಯ ಸದಸ್ಯರು ನಂತರದಲ್ಲಿ ಈ ಕಡತಗಳನ್ನು ಪರಿಶೀಲಿಸಲು ಸಾಧ್ಯವಾಗಿದೆ ಎಂದು ಸುದ್ದಿಸಂಸ್ಥೆಗಳು ತಿಳಿಸಿವೆ.
ಮಸ್ಕ್ ನೇತೃತ್ವದ ಇಲಾಖೆಯ ಅಧಿಕಾರಿಗಳು ಈ ಮಾಹಿತಿ ಪಡೆಯಲು ಅಗತ್ಯ ಇರುವ ಅನುಮತಿ ಹೊಂದಿರಲಿಲ್ಲ. ಹೀಗಾಗಿ ಯುಎಸ್‌ಎಐಡಿ ಏಜೆನ್ಸಿಯ ಜಾನ್ ವೊರೀಸ್ ಹಾಗೂ ಬ್ರಯಾನ್ ಮೆಕ್‌ಗಿಲ್ ಅವರು ಎಲಾನ್ ಮಸ್ಕ್ ನೇತ್ರತ್ವದ ಅಧಿಕಾರಿಗಳಿಗೆ ಮಾಹಿತಿ ಒದಗಿಸಲು ನಿರಾಕರಿಸಿದ್ದರು ಎಂದು ವರದುಯಾಗಿದೆ.
PublicNext
04/02/2025 10:26 pm