", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/399529_1738652465_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnandChitradurga" }, "editor": { "@type": "Person", "name": "9742704237" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ಭಾರತೀಯ ಸೈನಿಕ ಸೇನೆಯಲ್ಲಿ 22 ವರ್ಷಗಳ ಕಾಲ ದೇಶದ ವಿವಿಧ ರಾಜ್ಯಗಳಾದ ದೆಹಲಿ,ಜಮ್ಮುಕಾಶ್ಮೀರ,ಜಾರ್ಖಂಡ್, ಬಿಹಾರ್,ನಾಗಾ ಲ್ಯಾಂಡ್ ಮ...Read more" } ", "keywords": "Node,Chitradurga,News,Public-News,Others,Cultural-Activity", "url": "https://publicnext.com/node" }
ಚಿತ್ರದುರ್ಗ: ಭಾರತೀಯ ಸೈನಿಕ ಸೇನೆಯಲ್ಲಿ 22 ವರ್ಷಗಳ ಕಾಲ ದೇಶದ ವಿವಿಧ ರಾಜ್ಯಗಳಾದ ದೆಹಲಿ,ಜಮ್ಮುಕಾಶ್ಮೀರ,ಜಾರ್ಖಂಡ್, ಬಿಹಾರ್,ನಾಗಾ ಲ್ಯಾಂಡ್ ಮತ್ತು ಭಾರತದ ಗಡಿಭಾಗಗಳಲ್ಲಿ ಸೇವೆ ಸಲ್ಲಿಸಿ ಚಿತ್ರದುರ್ಗ ತಾಲ್ಲೂಕಿನ ಕುಂಚಗನಾಳ ಗ್ರಾಮದ ಮಲ್ಲಿಕಾರ್ಜುನ್ .ಎಸ್ ಹಾಗೂ ವೇಣುಗೋಪಾಲ್ ಇವರು ವಾಪಸ್ಸು ಗ್ರಾಮಕ್ಕೆ ಬಂದಾಗ ಅವರಿಗೆ ಅದ್ದೂರಿಯಾಗಿ ಸ್ವಾಗತವನ್ನು ನೀಡಲಾಯಿತು.
ದೇಶ ಸೇವೆಯನ್ನು ಮಾಡಿ ನಿವೃತ್ತಿಯಾಗಿ ಬಂದ ಮಲ್ಲಿಕಾರ್ಜನ್ ಹಾಗೂ ವೇಣುಗೋಪಾಲ್ ರವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ವಾದ್ಯಗೋಷ್ಟಿಯೊಂದಿಗೆ ರಾಜ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಿ ಅಂಬೇಡ್ಕರ್ ಹಾಗೂ ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಲಕ್ಷ್ಮಿಕಾಂತ. ಎಸ್ ಕುಂಚಿಗನಾಳು ಮತ್ತು ಅಶೋಕ್ ಕುಮಾರ್ ವಕೀಲರು ಬೆಳಗಟ್ಟ, ಸಿರಿವೆಲ್ಲಪ್ಪ, ತಮ್ಮಣ್ಣ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಕುಟುಂಬ ವರ್ಗದವರ ಮತ್ತು ಗ್ರಾಮಸ್ಥರು ಹಾಗೂ ಭಾರತೀಯ ನಿವೃತ್ತ ಅರೇ ಸೇನಾ ಸೈನಿಕರ ಸಂಘ ಅಧ್ಯಕ್ಷರು ಕಾರ್ಯದರ್ಶಿಗಳು ಪ್ರವಾಸಿ ಮಂದಿರದಲ್ಲಿ ಆತ್ಮೀಯವಾಗಿ ಮಲ್ಲಿಕಾರ್ಜುನ ಎಸ್ ಅವರನ್ನು ಸ್ವಾಗತಿಸಿ ತಾಯ್ನಾಡಿಗೆ ಬರಮಾಡಿಕೊಳ್ಳಲಾಯಿತು.
Kshetra Samachara
04/02/2025 12:31 pm