", "articleSection": "Cultural Activity,Public Feed,News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/271983_1738594170_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MahanteshMolakalmuru" }, "editor": { "@type": "Person", "name": "9380627082" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೊಳಕಾಲ್ಮುರು:ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆರ್ಲಗುಂಟೆ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿ...Read more" } ", "keywords": "Node,Chitradurga,Cultural-Activity,Public-Feed,News", "url": "https://publicnext.com/node" }
ಮೊಳಕಾಲ್ಮುರು:ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆರ್ಲಗುಂಟೆ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವಕ್ಕೆ ಬೆಳಿಗ್ಗೆ ಬಣ್ಣ ಬಣ್ಣದ ಬಾವುಟಗಳಿಂದ ಹಾಗೂ ಹೂವಿನ ಹಾರಗಳಿಂದ ವಿಶೇಷವಾಗಿ ರಥವನ್ನು ಸಿಂಗರಿಸಲಾಗಿತ್ತು.ನಂತರ ಶ್ರೀ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಸಕಲ ಪೂಜಾ ವಿಧಿ ವಿಧಾನಗಳನ್ನು ಅನುಸರಿಸುವ ಮೂಲಕ ಪ್ರತಿಷ್ಠಾಪಿಸಲಾಯಿತು.ಇನ್ನು ಶ್ರೀ ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಗ್ರಾಮದ ಗೊಂಚಗಾರ್ ನಾರಾಯಣಪ್ಪ ಮನೆಯಿಂದ ಬಲಿ ಅನ್ನ ತಂದು ಅರ್ಪಿಸಲಾಯಿತು.
ಕಾಸು ಮೀಸಲು ಮೊಸರು ಜೇನಿಗೆ ಹಾಲು ತಂದು ಶ್ರೀ ಆಂಜನೇಯ ಸ್ವಾಮಿ ರಥದ ಗಾಲಿಗಳಿಗೆ ಎಡೆ ಹಾಕಲಾಯಿತು, ನಂತರ ಮಹಾಮಂಗಳಾರತಿ ನೆರವೇರಿಸಿ ರಥಕ್ಕೆ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಹಾಗೂ ಗ್ರಾಮಸ್ಥರು ಚಾಲನೆ ನೀಡಿದರು.
ರಥೋತ್ಸವಕ್ಕೂ ಮುಂಚಿತವಾಗಿ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು,ನೇರಲಗುಂಟೆ ಗ್ರಾಮ ಪಂಚಾಯತಿ ಸದಸ್ಯ ಬತ್ತಯ್ಯನಹಟ್ಟಿ ಡಿ.ತಿಪ್ಪೇಸ್ವಾಮಿ 1,50,000ಗಳಿಗೆ ಮುಕ್ತಿ ಬಾವುಟವನ್ನು ಪಡೆದುಕೊಂಡರು.
Kshetra Samachara
03/02/2025 08:19 pm