ಸಾಗರ : ಅನಾರೋಗ್ಯ ಕಾಣಿಸಿಕೊಂಡಾಗ ಮಾತ್ರ ತಪಾಸಣೆಗೆ ಹೋಗೋಣ ಎನ್ನುವ ಕಲ್ಪನೆಯಿಂದ ಹೊರಗೆ ಬನ್ನಿ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರಿಂದ ಆರೋಗ್ಯವಂತರಾಗಿ ಇರಲು ಸಾಧ್ಯ ಎಂದು ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮಕ್ಕಳ ತಜ್ಞ ಡಾ. ಸೃಜನಾ ತಿಳಿಸಿದರು.
ತಾಲ್ಲೂಕಿನ ಹೊನ್ನೆಸರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಯಲ್ಲಿ ಇಂತಹ ತಪಾಸಣಾ ಶಿಬಿರ ಮಾಡುವುದರಿಂದ ಮಕ್ಕಳಲ್ಲಿರುವ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೆ ಗುರುತಿಸಲು ಸಾಧ್ಯವಾಗುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ಹೆಚ್ಚು ನಡೆಯಬೇಕು ಎಂದು ಹೇಳಿದರು.
ಕಾಲೇಜಿನ ವ್ಯವಸ್ಥಾಪಕ ಪ್ರಶಾಂತ್ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಲು ತಿಳಿಸಿದರು.
ಶಿಬಿರದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಪಾಸಣೆ ನಡೆಸಲಾಯಿತು. ಡಾ. ನಿಖಿಲ್, ಡಾ. ಕುಮಾರ್, ಡಾ. ಮಹೇಶ್, ಡಾ. ಗಣೇಶ್, ಡಾ. ಅಮೂಲ್ಯ, ಡಾ. ಹರ್ಷವರ್ಧನ್, ಡಾ. ವಿವೇಕ್, ಡಾ. ವಿಶ್ವಾಸ್ ಇನ್ನಿತರರು ತಪಾಸಣೆ ನಡೆಸಿದರು. ಲಕ್ಷö್ಮಣ್, ನೋಡೆಲ್ ಅಧಿಕಾರಿ ಪ್ರದೀಪ್, ರತ್ನಾಕರ್, ನೂರ್ ಅಹ್ಮದ್, ವೇದಾವತಿ, ಜಯಂತಿ, ಶಿಲ್ಪರಾಣಿ ಇನ್ನಿತರರು ಹಾಜರಿದ್ದರು.
Kshetra Samachara
01/02/2025 06:01 pm