ಶಿವಮೊಗ್ಗ: ಮಧ್ಯಮ ವರ್ಗದ ಜನತೆಯನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆಯಲ್ಲಿ ಭಾರಿ ಪ್ರಮಾಣದ ಅನುಕೂಲತೆಯನ್ನು ವಿತ್ತ ಸಚಿವರು ಅನುವು ಮಾಡಿಕೊಡುವ ಮುಖಾಂತರ ಮಧ್ಯಮ ವರ್ಗ ದೇಶದ ಬಲವರ್ಧನೆಗೆ ಬೆನ್ನೆಲುಬು ಎಂದು ವ್ಯಾಖ್ಯಾನಿಸಿದ ಮುಂಗಡಪತ್ರ ಇದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದ್ದಾರೆ.
ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ದೇಶದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವ ಹಾಗೂ ಉಳಿತಾಯಕ್ಕೆ ಹೆಚ್ಚು ಒತ್ತು ಕೊಡುವ ಘನ ಉದ್ದೇಶದಿಂದ ವಿತ್ತ ಸಚಿವೆಯರು ಸಾಧ್ಯವಾದ ಎಲ್ಲಾ ರೀತಿಯ ನೆರವನ್ನು ವಿದ್ಯಾರ್ಥಿಗಳಿಗೆ, ಉದ್ಯಮ ಕ್ಷೇತ್ರ, ಕೃಷಿ ಕ್ಷೇತ್ರ, ಹಣಕಾಸಿನ ಕ್ಷೇತ್ರಕ್ಕೆ ಒತ್ತು ಕೊಡುವ ಮೂಲಕ ಹೊಸ ಭರವಸೆಯನ್ನು ಎಲ್ಲಾ ವರ್ಗದ ಜನರಲ್ಲಿ ಮೂಡಿಸಿರುವ ಮುಂಗಡ ಪತ್ರ ಎಂದು ಹೇಳಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ.
PublicNext
01/02/2025 10:19 pm