ಶಿವಮೊಗ್ಗ: ಕೇಂದ್ರ ಸರ್ಕಾರದ ಬಜೆಟ್ ಮೇಲೆ ರೈತರು ಸಾಕಷ್ಟು ನಿರೀಕ್ಷೆ ಇಟ್ಟಿದ್ದರು. ಅವು ಹುಸಿಯಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರೈತರ ಬೆಳೆಗಳಿಗೆ ಎಂಎಸ್ಪಿ ಜಾರಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಆಗಿಲ್ಲ. ಈ ಬಜೆಟ್ ನಿಂದಾಗಿ ರೈತರಿಗೆ ನಿರಾಸೆ ಆಗಿದೆ ಎಂದರು.
ಇನ್ನು ಸಾಲಕ್ಕೆ ಒತ್ತು ಕೊಡುವ ಕೆಲಸಗಳು ಆಗಬೇಕಿತ್ತು ಅದು ಆಗಿಲ್ಲ. ಬ್ಯಾಂಕ್‌ಗಳಲ್ಲಿ ಸುಲಭ ರೀತಿಯಲ್ಲಿ ಸಾಲ ಸಿಗುವ ಹಾಗೇ ಮಾಡಬೇಕಿತ್ತು. ಆದಾಯ ಬರುವವರಿಗೆ ತುಂಬಾ ರಿಯಾಯಿತಿ ನೀಡಿದ್ದಾರೆ ಅಷ್ಟೇ ಎಂದರು.
ಮಧ್ಯಮ ವರ್ಗದವರಿಗೆ ತೆರಿಗೆ ರಿಯಾಯಿತಿ ನೀಡಿರೋದು ಸ್ವಾಗರ್ತಾರ್ಹ. ಆದಾಯವೇ ಇಲ್ಲದ ರೈತರ ಬಗ್ಗೆ ಬಜೆಟ್‌ನಲ್ಲಿ ಗಮನ ಹರಿಸಿಲ್ಲ. ಸಾಲ ಮನ್ನಾ ಹಾಗೂ ಸಾಲ ಹೆಚ್ಚು ಕೊಡುವ ಯೋಜನ ಘೋಷಣೆ ಮಾಡಿಲ್ಲ. ಕೇಂದ್ರ ಬಜೆಟ್ ನಲ್ಲಿ ಕಬ್ಬಿನ ಬೆಳೆಗೆ ಎಂಎಸ್ಪಿ ಸಹ ಘೋಷಣೆ ಮಾಡಿಲ್ಲ. ರೈತರ ಬಗ್ಗೆ ಚಿಂತನೆ ಮಾಡುವ ಚೆರ್ಚೆಗಳು ಲೋಕಸಭೆಯಲ್ಲಿ ನಡೆಯಬೇಕಿದೆ ಎಂದರು.
PublicNext
01/02/2025 07:14 pm