ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಸಿಂಹರಾಜಪುರ: ಡೈನಾಮೈಟ್ ಸಿಡಿದು ಮನೆಗಳ ಮೇಲೆ ಬಿದ್ದ ಕಲ್ಲುಗಳು - ತಪ್ಪಿದ ಭಾರೀ ಅನಾಹುತ

ನರಸಿಂಹರಾಜಪುರ: ಭದ್ರಾ ಮೇಲ್ದಂಡೆ ಕಾಲುವೆಯ ಕಾಮಗಾರಿ ವೇಳೆ ಬಂಡೆ ಸ್ಫೋಟಿಸಲು ಇಟ್ಟ ಡೈನಾಮೈಟ್ ಸಿಡಿದು ಪಕ್ಕದಲ್ಲಿರುವ 10ಕ್ಕೂ ಹೆಚ್ಚು ಮನೆಗಳ ಮೇಲೆ ಕಲ್ಲುಗಳು ಬಿದ್ದು ಹಾನಿಯಾಗಿದೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಾತೋಳಿ ಗ್ರಾಮದಲ್ಲಿ ನಡೆದಿದೆ.

ಭದ್ರಾ ಮೆಲ್ದಂಡೆ ಯೋಜನೆಯ ಕಾಮಗಾರಿ ನಡೆಯುತ್ತಿದ್ದು ಈ ವೇಳೆ ಬಂಡೆ ಒಡೆಯಲು ಡೈನಾಮೈಟ್ ಸಿಡಿಸಲಾಗಿದೆ. ಇದರ ಜೊತೆ ಜಿಲೆಟಿನ್ ಕಡ್ಡಿಗಳನ್ನು ಬಳಸಿದ್ದರಿಂದ ಸ್ಫೋಟದ ಪ್ರಮಾಣ ಹೆಚ್ಚಾಗಿ ದೊಡ್ಡ ದೊಡ್ಡ ಬಂಡೆ ಕಲ್ಲಿನ ತುಂಡುಗಳು ಮನೆಗಳ ಮೇಲೆ ಬಿದ್ದಿವೆ. ಈ ವೇಳೆ ಮನೆಯಲ್ಲಿದ್ದ ಬಾಣಂತಿ ಮತ್ತು ಮಗು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಭದ್ರಾ ಡ್ಯಾಮ್‌ನಿಂದ ಚಿತ್ರದುರ್ಗ, ತುಮಕೂರು, ಕೋಲಾರಕ್ಕೆ ನಿರೋದಗಿಸುವ ಯೋಜನೆಯ ಕಾಮಗಾರಿ ನಡೆಸುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಪರಿಣಾಮ 10ಕ್ಕೂ ಹೆಚ್ಚು ಮನೆಗಳ ಮೇಲೆ ಕಲ್ಲಿನ ರಾಶಿಗಳು ಬಿದ್ದು ಹಾನಿಯಾಗಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

31/01/2025 06:33 pm

Cinque Terre

28.58 K

Cinque Terre

0