ಚಿಕ್ಕಮಗಳೂರು: ಇಂದು ಬೆಳಗಿನ ಜಾವ ರಸ್ತೆ ಬದಿಯಲ್ಲಿ ಹುಲಿರಾಯ ಹೊಂಚು ಹಾಕುತ್ತಾ ಕುಳಿತಿರುವ ದೃಶ್ಯವನ್ನು ಪ್ರವಾಸಿಗರು ಸೆರೆಹಿಡಿದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ ಪ್ರವಾಸಿ ತಾಣದ ವೀಕ್ಷಣೆಗೆಂದು ಹೋಗುತ್ತಿದ್ದ ಪ್ರವಾಸಿಗರು ವ್ಯಾಘ್ರ ನನ್ನು ನೋಡಿ ವಾಹನವನ್ನು ನಿಲ್ಲಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ.
ಹುಲಿಯೂ ಒಂದು ಬದಿಯಿಂದ ಮತ್ತೊಂದು ಬದಿಗೆ ರಸ್ತೆ ದಾಟಲು ಕಾದು ಕುಳಿತಿತ್ತು. ನಂತರ ನಿಧಾನವಾಗಿ ರಸ್ತೆ ಮೇಲೆ ಬಂದಿರುವ ದೃಶ್ಯವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ಆಗಾಗ ಹುಲಿಗಳು ಕಾಣಿಸಿಕೊಳ್ಳುತ್ತಿರುತ್ತವೆ. ಆದರೆ ಇಂದು ಬೆಳ್ಳಂಬೆಳಿಗ್ಗೆ ಮೈತುಂಬಿಕೊಂಡಿರುವ ವ್ಯಾಘ್ರ ನನ್ನ ನೋಡಿ ಒಂದು ಕ್ಷಣ ಪ್ರವಾಸಿಗರು ಭಯಗೊಂಡಿದ್ದಾರೆ.
PublicNext
01/02/2025 01:13 pm