ಚಿಕ್ಕಮಗಳೂರು: ಸಾಮಿಲ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿರುವ ಘಟನೆ ಚಿಕ್ಕಮಗಳೂರು ಹೊರವಲಯದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಅಂಬಿಕಾ ಸಾಮಿಲ್ ನಲ್ಲಿ ನಡೆದಿದೆ.
ಸಾಮಿಲ್ ನಾ ಸಾಯಿಂಗ್ ಯಂತ್ರದ ಸಮೀಪ ಇದ್ದ ಮರದ ತೊಗಟೆಗಳಿಗೆ ಹಬ್ಬಿದ ಬೆಂಕಿ ನಿಧಾನವಾಗಿ ಮರದ ತುಂಡುಗಳಿಗೂ ಹಬ್ಬಿತಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
PublicNext
02/02/2025 09:02 am