", "articleSection": "Infrastructure,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738158250-V10~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarNavalagunda" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವಲಗುಂದ: ಸಾರ್ವಜನಿಕರಿಗೆ ಗ್ಯಾಸ್ ಸೋರಿಕೆ ವಿಪತ್ತು ನಿರ್ವಹಣೆ ಅರಿವು ಮೂಡಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಅಣ್ಣಿಗೇರಿ ತಾಲೂಕಿನ ಶಲವ...Read more" } ", "keywords": ",Hubballi-Dharwad,Infrastructure,Government,News,Public-News", "url": "https://publicnext.com/node" } ನವಲಗುಂದ: ಸಾರ್ವಜನಿಕರಿಗೆ ಗ್ಯಾಸ್ ಸೋರಿಕೆ ವಿಪತ್ತು ನಿರ್ವಹಣೆ ಅರಿವು ಮುಖ್ಯ - ಡಿಸಿ ದಿವ್ಯಪ್ರಭು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸಾರ್ವಜನಿಕರಿಗೆ ಗ್ಯಾಸ್ ಸೋರಿಕೆ ವಿಪತ್ತು ನಿರ್ವಹಣೆ ಅರಿವು ಮುಖ್ಯ - ಡಿಸಿ ದಿವ್ಯಪ್ರಭು

ನವಲಗುಂದ: ಸಾರ್ವಜನಿಕರಿಗೆ ಗ್ಯಾಸ್ ಸೋರಿಕೆ ವಿಪತ್ತು ನಿರ್ವಹಣೆ ಅರಿವು ಮೂಡಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ಜಿಎಐಎಲ್ (ನ್ಯಾಚುರಲ್ ಗ್ಯಾಸ್ ಟ್ರಾನ್ಸಮಿಷನ್ ಕಂಪನಿ) ಇಂಡಿಯಾ ಲಿಮಿಟೆಡ್ ಮುಂಭಾಗದಲ್ಲಿ ಧಾರವಾಡ ಜಿಲ್ಲೆಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ 'ವಿಪತ್ತು ನಿರ್ವಹಣೆ ಅಣುಕು ಪ್ರದರ್ಶನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗ್ಯಾಸ್ ಸೋರಿಕೆ ಕಂಡುಬಂದಾಗ ಯಾವುದೇ ರೀತಿಯ ಜೀವ ಹಾನಿ ಹಾಗೂ ಆಸ್ತಿ ಹಾನಿ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಿತಿಯಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಅಣುಕು ಪ್ರದರ್ಶನ ನಡೆಸಿಕೊಡಲಾಯಿತು. ಮೊದಲ ಹಂತ, ಎರಡನೇ ಹಂತ ಮತ್ತು ಮೂರನೇ ಹಂತದಲ್ಲಿ ಗ್ಯಾಸ್ ಸೋರಿಕೆ ಆದಾಗ ಯಾವ ರೀತಿಯಲ್ಲಿ ತಡೆಗಟ್ಟಬೇಕು ಎನ್ನುವುದರ ಬಗ್ಗೆ ತಿಳಿಸಲಾಯಿತು. ಅಲ್ಲದೇ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಣುಕು ಪ್ರದರ್ಶನದ ಮೂಲಕ ಜನರಿಗೆ ತಿಳಿಯಪಡಿಸಲಾಯಿತು.

ಈ ಜಾಗೃತಿ ಕಾರ್ಯಕ್ರಮದಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಭಾಗಿಯಾಗಿ ಮಾತನಾಡಿ, ವಿವಿಧ ಇಲಾಖೆಗಳ ಜವಾಬ್ದಾರಿ ವಿವರಿಸಿದರು.

Edited By : Suman K
Kshetra Samachara

Kshetra Samachara

29/01/2025 07:14 pm

Cinque Terre

44.9 K

Cinque Terre

0

ಸಂಬಂಧಿತ ಸುದ್ದಿ