", "articleSection": "Crime,Law and Order,Education,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738146061-A6~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಧಾರವಾಡದ ಬುದ್ಧರಕ್ಕಿಥ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ದೈಹಿಕ ಶಿಕ್ಷಕನೊಬ್ಬ ಹಲ್ಲೆ ನಡೆಸಿದ್ದಾನೆ ಎಂಬ ವಿಚಾರಕ್ಕೆ ಸಂಬಂಧಿಸಿದಂ...Read more" } ", "keywords": ",Hubballi-Dharwad,Crime,Law-and-Order,Education,News,Public-News", "url": "https://publicnext.com/node" }
ಧಾರವಾಡ: ಧಾರವಾಡದ ಬುದ್ಧರಕ್ಕಿಥ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ದೈಹಿಕ ಶಿಕ್ಷಕನೊಬ್ಬ ಹಲ್ಲೆ ನಡೆಸಿದ್ದಾನೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಡಾ.ಬಿ.ಆರ್ ಅಂಬೇಡ್ಕರ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎಫ್.ಎಚ್.ಜಕ್ಕಪ್ಪನವರ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರವೀಣ ಕರಡಿಗುದ್ದಿ ಎಂಬ ವಿದ್ಯಾರ್ಥಿ ಮೇಲೆ ದೈಹಿಕ ಶಿಕ್ಷಕರು ಹಲ್ಲೆ ಮಾಡಿದ್ದು ಸುಳ್ಳು. ಪ್ರವೀಣ ಎಂಬ ವಿದ್ಯಾರ್ಥಿ ಇತರ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ಸಾಕಷ್ಟು ವಿದ್ಯಾರ್ಥಿಗಳು ದೂರು ಹೇಳಿದ್ದರಿಂದ ದೈಹಿಕ ಶಿಕ್ಷಕರು ಆತನನ್ನ ಕರೆದು ಆತನ ಮುಂಗೈ ಹಿಡಿದಾಗ ತಾನೇ ಕೊಸರಿಕೊಂಡು ಹೋಗುವ ಸಂದರ್ಭದಲ್ಲಿ ಆ ಗಾಯ ಆಗಿದೆ ಎಂದಿದ್ದಾರೆ.
ಆ ವಿದ್ಯಾರ್ಥಿಯನ್ನು ಯಾರೂ ಕೂಡಿ ಹಾಕಿಲ್ಲ. ಶಿಕ್ಷಕರೇ ಆತನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆತನಿಗೆ ಯಾರೂ ಜಾತಿ ನಿಂದನೆ ಮಾಡಿಲ್ಲ. ಇಷ್ಟಕ್ಕೂ ಈ ಸಂಸ್ಥೆಯಲ್ಲಿರುವ ಸಿಬ್ಬಂದಿ ಎಲ್ಲರೂ ಒಂದೇ ಜಾತಿಯವರಿರಬೇಕಾದರೆ ಆತನನ್ನು ಜಾತಿ ಹಿಡಿದು ಬೈಯುವ ಅವಶ್ಯಕತೆಯೇ ಬೀಳುವುದಿಲ್ಲ. ನಾವ್ಯಾರೂ ಅವರಿಗೆ ಎಫ್ಐಆರ್ ದಾಖಲಿಸಬೇಡಿ ಎಂದು ಹೇಳಿಲ್ಲ. ಈ ಬಗ್ಗೆ ದೂರು ದಾಖಲಾದರೆ ಸೂಕ್ತ ಏಕೆಂದರೆ ಎಲ್ಲವೂ ಸೂಕ್ತ ತನಿಖೆ ನಡೆಯುತ್ತದೆ. ಎಫ್ಐಆರ್ ದಾಖಲಿಸದಂತೆ ನಾವು ಒತ್ತಡ ಹಾಕಿಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಲಿ. ಆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿಯ ಪೋಷಕರು ಮಾಡಿದ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದದ್ದು ಎಂದು ಜಕ್ಕಪ್ಪನವರ ತಿಳಿಸಿದ್ದಾರೆ.
Kshetra Samachara
29/01/2025 03:51 pm