ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾಕುಂಭ ಮೇಳಕ್ಕೆ ಬರಲಿದ್ದಾರೆ ಮೋದಿ - ಫೆಬ್ರವರಿ 5ರಂದು ಅಮೃತ ಸ್ನಾನ

ಪ್ರಯಾಗ್ ರಾಜ್: ಒಂದೆಡೆ, ಪ್ರಪಂಚದಾದ್ಯಂತದ ಭಕ್ತರು ವಿಶ್ವದ ಅತಿದೊಡ್ಡ ಧಾರ್ಮಿಕ - ಸಾಮಾಜಿಕ ಕೂಟ ‘ಮಹಾ ಕುಂಭ 2025’ರಲ್ಲಿ ಸೇರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 5ರಂದು ಅಮೃತ್ ಸ್ನಾನಕ್ಕೆ ತೆರಳಬಹುದು ಎಂದು ವರದಿಯಾಗಿದೆ. ಅದೇ ದಿನ ದೆಹಲಿಯಲ್ಲಿ ಚುನಾವಣೆ ಇದೆ.

ಇದಲ್ಲದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಫೆಬ್ರವರಿ 10 ರಂದು ಭೇಟಿ ನೀಡಲಿದ್ದಾರೆ ಎನ್ನಲಾಗ್ತಿದ್ದು, ಜನವರಿ 27 ರಂದು ಅಮಿತ್ ಶಾ ಪವಿತ್ರ ಸ್ನಾನಕ್ಕೆ ತೆರಳಬಹುದು ಎಂದು ವರದಿಯಾಗಿದೆ.

ಜನವರಿ 29 ರಂದು ಮಹಾಕುಂಭ ನಗರದಲ್ಲಿ ನಡೆಯಲಿರುವ ಮೌನಿ ಅಮವಾಸ್ಯೆಯ ಅಮೃತಸ್ನಾನಕ್ಕಾಗಿ 10 ಕೋಟಿ ಜನರು ಪವಿತ್ರ ತ್ರಿವೇಣಿ ದಡವನ್ನ ತಲುಪುತ್ತಾರೆ ಎಂದು ಅಂದಾಜಿಸಲಾಗಿದೆ. ಈ ಪುಣ್ಯ ಮತ್ತು ಪವಿತ್ರ ಸಂದರ್ಭದಲ್ಲಿ ಭಾಗಿಗಳಾಗಲು ವಿದೇಶಿ ಭಕ್ತರು ಮತ್ತು ಅನೇಕ ದೇಶಗಳ ಭಕ್ತರು ಸಹ ಮಹಾಕುಂಭ ನಗರಕ್ಕೆ ಬರುತ್ತಿದ್ದಾರೆ.

ಜನವರಿ 29 ರಂದು ಮೌನಿ ಅಮವಾಸ್ಯೆಯಂದು ನಡೆಯುವ ಅಮೃತ ಸ್ನಾನವು ಪ್ರಯಾಗರಾಜ್ ಮಹಾಕುಂಭದಲ್ಲಿ ಭಕ್ತರ ಪ್ರವಾಹದ ದೃಷ್ಟಿಯಿಂದ ಹೊಸ ದಾಖಲೆಯನ್ನ ದಾಖಲಿಸಲಿದೆ. ಆಡಳಿತದ ಹೇಳಿಕೆಯ ಪ್ರಕಾರ, ಈ ಸ್ನಾನದ ಮಹೋತ್ಸವದಲ್ಲಿ 7 ರಿಂದ 10 ಕೋಟಿ ಭಕ್ತರು ಮತ್ತು ಪ್ರವಾಸಿಗರು ಮಹಾಕುಂಭವನ್ನು ತಲುಪುವ ನಿರೀಕ್ಷೆಯಿದೆ, ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ.

Edited By : Nagaraj Tulugeri
PublicNext

PublicNext

23/01/2025 10:51 pm

Cinque Terre

6.3 K

Cinque Terre

1

ಸಂಬಂಧಿತ ಸುದ್ದಿ