ಮುಂಬೈ: ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆಗೆ 'ಭಾರತ ರತ್ನ' ಪ್ರಶಸ್ತಿ ನೀಡಬೇಕು ಎಂದು ಶಿವಸೇನೆ (ಯುಬಿಟಿ) ಒತ್ತಾಯಿಸಿದೆ.
ಠಾಕ್ರೆ ಅವರ 99ನೇ ಜಯಂತಿ ಅಂಗವಾಗಿ ಪತ್ರಿಕಾಗೋಷ್ಟಿಯಲ್ಲಿ ಮಾತನಡಿದ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲದವರಿಗೆ ಆ ಪ್ರಶಸ್ತಿ ನೀಡಲಾಗಿದೆ. ಹಾಗಿದ್ದ ಮೇಲೆ ಬಾಳಾ ಠಾಕ್ರೆ ಅವರಿಗೇಕೆ ಇನ್ನೂ ನೀಡಿಲ್ಲ? ಅವರು ಭಾರತದಲ್ಲಿ ನೈಜ ಹಿಂದುತ್ವದ ಬೀಜ ಬಿತ್ತಿದ್ದಾರೆ. ಹಿಂದೂ ಹೃದಯ ಸಾಮ್ರಾಟನಿಗೆ ಭಾರತ ರತ್ನ ನೀಡಲೇಬೇಕು. ಠಾಕ್ರೆ ಅವರ ಜನ್ಮಶತಮಾನೋತ್ಸವಕ್ಕೆ ಇನ್ನೂ ವರ್ಷವಷ್ಟೇ ಬಾಕಿ ಉಳಿದಿದೆ. ಅದರೊಳಗಾಗಿ ಠಾಕ್ರೆಗೆ ಭಾರತ ರತ್ನ ಪ್ರಶಸ್ತಿ ಘೋಷಿಸಬೇಕು ಎಂದು ಸಂಜಯ್ ರಾವುತ್ ಒತ್ತಾಯಿಸಿದ್ದಾರೆ.
PublicNext
23/01/2025 07:03 pm