", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/387839-1737613947-WhatsApp-Image-2025-01-23-at-11.02.32-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಭಿನ್ನಮತದ ಸುದ್ದಿ ಬೆನ್ನಲ್ಲೇ ಮತ್ತೊಂದು ಅಸಮಾಧಾನ ಸ್ಪೋಟಗೊಳ್ಳುವ ಸುದ...Read more" } ", "keywords": "Bangalore, Senior BJP Leaders, Dinner Meeting, Former CM DV Sadananda Gowda, Vijayendra Absent, Karnataka Politics, BJP Leaders Gathering, Political Meeting, Karnataka News.,,Politics", "url": "https://publicnext.com/node" }
ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಭಿನ್ನಮತದ ಸುದ್ದಿ ಬೆನ್ನಲ್ಲೇ ಮತ್ತೊಂದು ಅಸಮಾಧಾನ ಸ್ಪೋಟಗೊಳ್ಳುವ ಸುದ್ದಿ ಬಂದಿದೆ. ಹೌದು ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕದಲ್ಲಿ ಕೆಲ ಹಿರಿಯ ನಾಯಕರ ವಿಜಯೇಂದ್ರ ನಡೆಗೆ ಅಸಮಾಧಾನಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ತಡರಾತ್ರಿ ಮಾಜಿ ಸಿಎಂ ಡಿವಿ ಸದಾನಂದ ಗೌಡ ನಿವಾಸದಲ್ಲಿ ಕೆಲ ಹಿರಿಯ ನಾಯಕರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಡಿಸಿಎಂ ಅಶ್ವಥ್ ನಾರಾಯಣ , ನಿರ್ಮಲ್ ಕುಮಾರ್ ಸುರಾನಾ ಸೇರಿದಂತೆ ಕೆಲ ನಾಯಕರು ಸಭೆ ನಡೆಸಿದ್ದಾರೆ.
ಕೋರ್ ಕಮಿಟಿ ಸಭೆಯ ಬಳಿಕ ವಿಜಯೇಂದ್ರ ಬಿಟ್ಟು ಹೀಗೆ ಡಿವಿಎಸ್ ಸಭೆಯಲ್ಲಿ ಸಭೆ ಸೇರಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ ಜಿಲ್ಲಾಧ್ಯಕ್ಷರ ನೇಮಕದಲ್ಲಿ ರಾಜ್ಯಾಧ್ಯಕ್ಷರ ನಡೆಯ ಬಗ್ಗೆ ಅಸಮಾಧಾನಗೊಂಡು ಸಭೆ ಸೇರಿದ್ದಾರೆ ಎನ್ನಲಾಗಿದೆ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ, ಹಾವೇರಿ ಜಿಲ್ಲಾ ಅಧ್ಯಕ್ಷರು ಸೇರಿ ಹಲವು ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ.
ಜಿಲ್ಲಾಧ್ಯಕ್ಷರ ನೇಮಕದಲ್ಲಿ ಸ್ಥಳೀಯ ಶಾಸಕರ ಅಭಿಪ್ರಾಯವನ್ನು ಪರಿಗಣಿಸಬೇಕು ಆದ್ರೆ ವಿಜಯೇಂದ್ರ ತಮಗೆ ಬೇಕಾದ ಜಿಲ್ಲಾಧ್ಯಕ್ಷರ ನೇಮಕ ಮಾಡಲು ಮುಂದಾಗುತ್ತಿದ್ದಾರೆ ಇದು ಸರಿಯಲ್ಲ ಹೀಗಾಗಿ ಈ ಕುರಿತಂತೆ ನಿನ್ನೆ ತಡ ರಾತ್ರಿ ಡಿವಿಎಸ್ ನಿವಾಸಲ್ಲಿ ಚರ್ಚೆ ನಡೆಸಿದ್ದಾರೆ. ಇದು ಕೇವಲ ಜಿಲ್ಲಾಧ್ಯಕ್ಷರ ನೇಮಕ ಸಂಬಂಧಿಸಿದ ಚರ್ಚೆ ಅಥವಾ ಬೇರೆನಾ ಅನ್ನೋದು ಪಕ್ಷದ ಪಡಸಾಲೆಯಲ್ಲಿ ಚರ್ಚೆ ಶುರುವಾಗಿದೆ.
ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಯತ್ನಾಳ್ ಟೀಂ ನಡುವೆಯ ಭಿನ್ನಮತದ ನಡುವೆ ರೆಡ್ಡಿ - ರಾಮುಲು ಭಿನ್ನಮತ ಸಹ ಸ್ಫೋಟಗೊಂಡಿದೆ ಇದ್ರ ನಡುವೆ ಈಗ ಜಿಲ್ಲಾಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದ್ದು ಎಂದು ಹಿರಿಯ ನಾಯಕರು ಸಭೆ ನಡೆಸಿದ್ದು ನೋಡಿದ್ರೆ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಲ್ಲ ಎಂದು ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ.
PublicNext
23/01/2025 12:02 pm