", "articleSection": "Infrastructure,Health & Fitness,Government", "image": { "@type": "ImageObject", "url": "https://prod.cdn.publicnext.com/s3fs-public/378325-1737538196-5.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಶಿವಮೊಗ್ಗ ಜಿಲ್ಲಾದ್ಯಂತ ವರ್ಷದಿಂದ ವರ್ಷಕ್ಕೆ ನಾಯಿಗಳ ದಾಳಿಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಮೂರು ವರ್ಷದಲ್ಲಿ 71 ಸಾವಿರಕ್...Read more" } ", "keywords": "Shivamogga News, Dog Bite Cases, Rabies Deaths, Karnataka Health News, Animal Bite Injuries, Indian Public Health, Shivamogga District News, Rabies Awareness, Dog Attack Victims.,Shimoga,Infrastructure,Health-and-Fitness,Government", "url": "https://publicnext.com/node" } ಶಿವಮೊಗ್ಗ : ಮೂರು ವರ್ಷದಲ್ಲಿ 71 ಸಾವಿರ ಜನಕ್ಕೆ ನಾಯಿ ಕಡಿತ, ಆರು ಮಂದಿ ರೇಬಿಸ್‌ಗೆ ಬಲಿ, ಕಳೆದ ವರ್ಷವೇ ನಾಲ್ವರ ಸಾವು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಮೂರು ವರ್ಷದಲ್ಲಿ 71 ಸಾವಿರ ಜನಕ್ಕೆ ನಾಯಿ ಕಡಿತ, ಆರು ಮಂದಿ ರೇಬಿಸ್‌ಗೆ ಬಲಿ, ಕಳೆದ ವರ್ಷವೇ ನಾಲ್ವರ ಸಾವು

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾದ್ಯಂತ ವರ್ಷದಿಂದ ವರ್ಷಕ್ಕೆ ನಾಯಿಗಳ ದಾಳಿಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಮೂರು ವರ್ಷದಲ್ಲಿ 71 ಸಾವಿರಕ್ಕೂ ಅಧಿಕ ಜನರು ಬೀದಿನಾಯಿಗಳ ಕಡಿತಕ್ಕೆ ಒಳಗಾಗಿದ್ದು, ಆರು ಮಂದಿ ರೇಬಿಸ್‌ಗೆ ತುತ್ತಾಗಿ ಮೃತಪಟ್ಟಿದ್ದಾರೆ. ಕಳೆದ ವರ್ಷವೇ ನಾಲ್ವರು ಬಲಿಯಾಗಿರುವುದು ಆತಂಕ ಹೆಚ್ಚುವಂತೆ ಮಾಡಿದೆ.

ಜಿಲ್ಲೆಯ ಶಿವಮೊಗ್ಗ ಮಹಾನಗರ ಪಾಲಿಕೆ, ಭದ್ರಾವತಿ ಮತ್ತು ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ತೀರ್ಥಹಳ್ಳಿ, ಸೊರಬ, ಹೊಸನಗರ, ಕಾರ್ಗಲ್ ಮತ್ತು ಶಿರಾಳಕೊಪ್ಪ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಬೀದಿ ನಾಯಿಗಳ ನಿಯಂತ್ರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೂ ಬೀದಿ ನಾಯಿಗಳ ಏರಿಕೆ ಮಾತ್ರ ಕಡಿಮೆ ಆಗುತ್ತಿಲ್ಲ. ಪರಿಣಾಮ ಜನ-ಜಾನುವಾರುಗಳ ಮೇಲೆ ನಾಯಿಗಳ ದಾಳಿ ಕೂಡ ನಿಂತಿಲ್ಲ.

2022ರಲ್ಲಿ 19,593 ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು. 2023ರಲ್ಲಿ ನಾಯಿ ಕಡಿತದ ಪ್ರಕರಣಗಳು 25,764ಕ್ಕೆ ಏರಿಕೆಯಾಗಿದ್ದರೆ, ಕಳೆದ ವರ್ಷ 2024ರಲ್ಲಿ 26,950 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದರು. ಲಕ್ಷಾಂತರ ರೂ. ಸುರಿದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದರೂ ಬೀದಿ ನಾಯಿಗಳ ನಿಯಂತ್ರಣ ಮಾತ್ರ ಆಗುತ್ತಿಲ್ಲ ಎಂಬುದು ವಿಪರ್ಯಾಸ.

2024ರಲ್ಲಿ ಬೆಕ್ಕು ಕಚ್ಚಿ ಇಬ್ಬರು ಮೃತಪಟ್ಟಿದ್ದಾರೆ. ಬೆಕ್ಕುಗಳು ಕಚ್ಚಿದರೆ ಅಥವಾ ಪರಚಿದರೆ ಜನರು ಸಾಯುತ್ತಾರೆ ಎಂಬುದು ಬಹಳಷ್ಟು ಜನರಿಗೆ ಅರಿವಿಲ್ಲ. ಆದರೆ, ಬೆಕ್ಕುಗಳ ದಾಳಿಯಿಂದಲೂ ಜನರು ಸಾವಿಗೀಡಾಗುತ್ತಾರೆ ಎಂಬುದು ಶಿವಮೊಗ್ಗ ಜಿಲ್ಲೆಯಲ್ಲಿ ದೃಢಪಟ್ಟಿದೆ. ಬೆಕ್ಕು ಪರಚಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ರೇಬಿಸ್‌ಗೆ ಬಲಿಯಾಗಿದ್ದಾರೆ. ಅದೇ ರೀತಿ ನಾಯಿಗಳ ದಾಳಿಗೂ ಇಬ್ಬರು ಮೃತಪಟ್ಟಿದ್ದು, 2022 ಮತ್ತು 2023ರಲ್ಲಿ ತಲಾ ಒಬ್ಬರು ನಾಯಿ ದಾಳಿಗೆ ತುತ್ತಾಗಿದ್ದಾರೆ. ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಂತರವೂ ನಾಯಿಗಳ ಜನನ ನಿಯಂತ್ರಣ ಆಗುತ್ತಿಲ್ಲ ಎಂಬುದು ವಿಪರ್ಯಾಸ. ಇತ್ತೀಚೆಗೆ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಬೀದಿನಾಯಿಗಳ ನಿಯಂತ್ರಣ ಸಂಬಂಧ ಖಡಕ್ ಸೂಚನೆ ನೀಡಿದ್ದಾರೆ.

ವಿಶೇಷ ವರದಿ: ವೀರೇಶ್‌ ಜಿ. ಹೊಸೂರ್‌, ಪಬ್ಲಿಕ್‌ ನೆಕ್ಸ್ಟ್‌ ಶಿವಮೊಗ್ಗ

Edited By : Somashekar
PublicNext

PublicNext

22/01/2025 03:00 pm

Cinque Terre

40.12 K

Cinque Terre

0

ಸಂಬಂಧಿತ ಸುದ್ದಿ