", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/235762-1737429293-360_F_976826821_bnxXFr61NsmU4Xys3H48Iyf7NfhAddhT.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೇಷ ರಾಶಿ ಆಸ್ತಿ ವ್ಯವಹಾರದಲ್ಲಿ ಹೂಡಿಕೆ ಮಾಡುವುದರಿಂದ ಶುಭ ಫಲ. ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುವ ಸವಾಲುಗಳು ಎದುರಾಗಬಹುದು. ಧೃತಿಗೆಡದೆ...Read more" } ", "keywords": "Daily Horoscope, Mangalvaar, Tuesday Horoscope, January 21 2025, Astrology, Zodiac Signs, Horoscope Today, Daily Astrology, Mangalvaar Ka Rashifal. ,,Astrology", "url": "https://publicnext.com/node" } ದಿನ ಭವಿಷ್ಯ: ಮಂಗಳವಾರ, 21 ಜನವರಿ 2025
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: ಮಂಗಳವಾರ, 21 ಜನವರಿ 2025

ಮೇಷ ರಾಶಿ

ಆಸ್ತಿ ವ್ಯವಹಾರದಲ್ಲಿ ಹೂಡಿಕೆ ಮಾಡುವುದರಿಂದ ಶುಭ ಫಲ. ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುವ ಸವಾಲುಗಳು ಎದುರಾಗಬಹುದು. ಧೃತಿಗೆಡದೆ ಮುಂದುವರೆಯುವುದರಿಂದ ಶುಭ ಫಲ ನಿರೀಕ್ಷಿಸಬಹುದು. ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳ ಮೇಲೆ ನಿಗಾವಹಿಸಿ.

ವೃಷಭ ರಾಶಿ

ಸೃಜನಶೀಲತೆಯಿಂದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಸರಿಯಾದ ದಿಕ್ಕಿನಲ್ಲಿ ಮುಂದುವರೆಯುವುದರಿಂದ ಜಯ ನಿಮ್ಮದಾಗಲಿದೆ. ಮನೆಯಲ್ಲಿ ಅಸ್ಥಿರ ವಾತಾವರಣವು ನಿಮ್ಮ ಮನಸ್ಸನ್ನು ಕದಲಿಸಬಹುದು. ಆಡಳಿತಾತ್ಮಕ ವಿಷಯಗಳು ಸುಧಾರಿಸಲಿವೆ.

ಮಿಥುನ ರಾಶಿ

ಮಾನಸಿಕವಾಗಿ ಸದೃಢರಾಗಿರುವಿರಿ. ಕಠಿಣ ಪರಿಸ್ಥಿತಿಗಳಲ್ಲಿ ಬುದ್ದಿವಂತಿಕೆಯಿಂದ ವರ್ತಿಸಿ. ಹಣದ ಹರಿವು ಹೆಚ್ಚಾಗಿ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಪಡೆಯುವಿರಿ. ಆಸ್ತಿ ಮತ್ತು ವಾಹನ ಖರೀದಿಗೆ ಸಂಬಂಧಿಸಿದಂತೆ ಶುಭ ದಿನ.

ಕರ್ಕಾಟಕ ರಾಶಿ

ನಿಮ್ಮ ಪ್ರೀತಿಪಾತ್ರರೊಂದಿಗೆ ವಿಶ್ವಾಸವನ್ನು ಉಳಿಸಿಕೊಳ್ಳಿ. ಅವರೊಂದಿಗೆ ಇಂದು ಆಹ್ಲಾದಕರ ಸಮಯವನ್ನು ಕಳೆಯುವಿರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇಂದು ನಿಮ್ಮ ಧೈರ್ಯ ಮತ್ತು ಸಾಮರ್ಥ್ಯ ಬಲಗೊಳ್ಳಲಿದ್ದು ಉತ್ತಮ ಸಂವಹಣವು ಪ್ರಗತಿಯ ಹಾದಿಯನ್ನು ತೆರೆಯಲಿದೆ.

ಸಿಂಹ ರಾಶಿ

ಇಂದು ನಿಮಗೆ ಲಾಭದ ಅವಕಾಶಗಳು ಹೆಚ್ಚಾಗಲಿವೆ. ಸಮಾಜದಲ್ಲಿ ಗೌರವ ಮನ್ನಣೆ ದೊರೆಯಲಿದೆ. ಕುಟುಂಬಸ್ಥರೊಂದಿಗೆ ಪ್ರವಾಸಕ್ಕಾಗಿ ಯೋಚಿಸಬಹುದು. ನಮ್ರತೆ ಮತ್ತು ಪ್ರೀತಿ ನಿಮ್ಮ ದಾರಿಯನ್ನು ಸುಗಮಗೊಳಿಸಲಿದೆ.

ಕನ್ಯಾ ರಾಶಿ

ನಿಮ್ಮ ಯಾವುದೇ ಕೆಲಸ ಕಾರ್ಯಗಳಲ್ಲಿ ನಮ್ರತೆಯನ್ನು ಕಾಪಾಡಿಕೊಳ್ಳಿ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಸ್ವಯಂ ಶಿಸ್ತು ಉದ್ಯೋಗದಲ್ಲಿ ನಿಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ನಿಮ್ಮ ವ್ಯಕ್ತಿತ್ವ ಮತ್ತು ನಡವಳಿಕೆಯು ಪ್ರಭಾವಶಾಲಿಯಾಗಿರುತ್ತದೆ.

ತುಲಾ ರಾಶಿ

ಇಂದು ತಾಳ್ಮೆಯಿಂದ ಜಾಗರೂಕರಾಗಿ ಕೆಲಸ ಮಾಡುವುದು ಒಳಿತು. ಉದ್ಯೋಗ ರಂಗದಲ್ಲಿ ಕೆಲವು ಅನಿರೀಕ್ಷಿತ ಸಂದರ್ಭಗಳು ಉಂಟಾಗಬಹುದು. ಸಂಬಂಧಗಳ ಬಗ್ಗೆ ನಿಮ್ಮ ಒಲವು ಹೆಚ್ಚಾಗಲಿದೆ. ಇಂದು ಸಾಲ ಮಾಡುವುದನ್ನು ತಪ್ಪಿಸಿ. ನಿಮ್ಮ ಬಜೆಟ್ ಗೆ ಅನುಗುಣವಾಗಿ ಮುಂದುವರೆಯಿರಿ.

ವೃಶ್ಚಿಕ ರಾಶಿ

ಹಣಕಾಸಿನ ವಿಚಾರದಲ್ಲಿ ಇಂದು ಶಕ್ತಿಶಾಲಿಯಾದ ದಿನ. ವೃತ್ತಿಪರ ಕ್ಷೇತ್ರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಿರಿ. ಆಡಳಿತಾತ್ಮಕ ಕ್ಷೇತ್ರದಲ್ಲಿ ಕೆಯಲ್ಸ ಮಾಡುವವರು ನಿಮ್ಮ ಕಾರ್ಯದಿಂದ ಬೇರೆಯವರನ್ನು ಆಕರ್ಷಿಸುವಿರಿ. ಸ್ಪರ್ಧಾತ್ಮಕ ವಿಚಾರಗಳಲ್ಲಿ ಜಯ ಸಾಧಿಸುವಿರಿ.

ಧನು ರಾಶಿ

ಇಂದು ಅದೃಷ್ಟವು ನಿಮಗೆ ಅಪೇಕ್ಷಿತ ಫಲಿತಾಂಶವನ್ನು ನೀಡುತ್ತದೆ. ತ್ವರಿತ ಪ್ರಗತಿಯ ಅವಕಾಶಗಳನ್ನು ಪಡೆಯುವಿರಿ. ಹಣಕಾಸಿನ ಸ್ಥಿತಿಯೂ ಬಲವಾಗಿರುತ್ತದೆ. ನಿರ್ವಹಣೆ ಮತ್ತು ಆಡಳಿತಾತ್ಮಕ ಪ್ರಜ್ಞೆ ಮೇಲುಗೈ ಸಾಧಿಸಲಿದೆ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ.

ಮಕರ ರಾಶಿ

ಅದೃಷ್ಟದ ಬೆಂಬಲದಿಂದ ಇಂದು ವೃತ್ತಿ ವ್ಯವಹಾರದಲ್ಲಿ ಹೊಸ ಎತ್ತರಕ್ಕೆ ಏರುವಿರಿ. ವ್ಯಾಪಾರದಲ್ಲಿ ಭಾರೀ ಲಾಭವನ್ನು ನಿರೀಕ್ಷಿಸಬಹುದು. ದೀರ್ಘಾವಧಿಯ ಚಟುವಟಿಕೆಗಳು ವೇಗವನ್ನು ಪಡೆಯಲಿವೆ. ಕೆಲಸದಲ್ಲಿ ನಿಮ್ಮ ಪ್ರಯತ್ನಗಳಿಗೆ ತಕ್ಕ ಫಲವನ್ನು ನಿರೀಕ್ಷಿಸಬಹುದು.

ಕುಂಭ ರಾಶಿ

ನಿಮ್ಮ ಗುರಿಗಳತ್ತ ಗಮನವಹಿಸಿ ಮುಂದುವರೆಯುವುದರಿಂದ ಶುಭ. ಅಗತ್ಯ ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ. ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಮತೋಲನ ಕಾಪಾಡಿಕೊಳ್ಳುವುದರ ಬಗ್ಗೆ ಅರಿವಿರಲಿ. ಪ್ರಮುಖ ಕೆಲಸಗಳಲ್ಲಿ ತಾಳ್ಮೆಯಿಂದ ಮುಂದುವರೆಯಿರಿ.

ಮೀನ ರಾಶಿ

ಕಠಿಣ ಪರಿಶ್ರಮವು ನಿಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ನಿರೀಕ್ಷಿತ ಫಲವನ್ನು ನೀಡಲಿದೆ. ವೃತ್ತಿಪರ ಅನುಭವಗಳಿಂದ ಪ್ರಯೋಜನವನ್ನು ಪಡೆಯುವಿರಿ. ಆದಾಯ ಹೆಚ್ಚಿಸಲು ಹೊಸ ಮಾರ್ಗಗಳು ಗೋಚರಿಸಲಿವೆ. ವೈಯಕ್ತಿಕ ವಿಚಾರಗಳಲ್ಲಿ ತಾಳ್ಮೆಯಿಂದ ಇರಿ.

Edited By : Nagaraj Tulugeri
PublicNext

PublicNext

21/01/2025 08:44 am

Cinque Terre

153.08 K

Cinque Terre

0