ಮೇಷ ರಾಶಿ: ಈ ದಿನ ಶುಭಕರವಾಗಿರುವುದಿಲ್ಲ. ಖಾಸಗಿ ಕ್ಷೇತ್ರದವರಿಗೆ ಕಚೇರಿಯಲ್ಲಿ ಜಗಳವಾಗುವ ಸಾಧ್ಯತೆ. ಕಾಲೋಚಿತವಾದ ಅನಾರೋಗ್ಯ ಸಮಸ್ಯೆ ಕಾಡಬಹುದು. ಯಾವುದು ಕೂಡ ಸಮಾಧಾನಕರವಾಗಿರುವುದಿಲ್ಲ. ವಿದ್ಯಾರ್ಥಿಗಳ ಮನಸ್ಸು ವಿಕೋಪಕ್ಕೆ ಹೋಗಬಹುದು.
ವೃಷಭ: ವ್ಯಾವಹಾರಿಕವಾಗಿ ಲಾಭವಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅವಕಾಶವಿದೆ. ಉತ್ತಮ ಯಶಸ್ಸಿನ ಬಾಗಿಲು ತೆರೆದಿದೆ. ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ದುಂಡು ವೆಚ್ಚಕ್ಕೆ ಕಡಿವಾಣ ಹಾಕಿ.
ಮಿಥುನ: ಇಂದಿನ ದಿನಚರಿಯಲ್ಲಿ ಕೆಲವು ಕೆಲಸಗಳನ್ನು ಬಿಟ್ಟುಬಿಡಿ. ಹೊಸ ವಿಚಾರದ ಹಿಂದೆ ನೀವು ಹೋಗಬಹುದು. ಪ್ರಭಾವಿ ವ್ಯಕ್ತಿಗಳಿಂದ ಕಲಿಯಲು ಅವಕಾಶವಿದೆ. ಅಹಂಭಾವವನ್ನು ಸ್ವಲ್ಪ ದೂರವಿಡಿ. ಇಂದು ಬೇರೆಯವರನ್ನು ಗೌರವಿಸಿ.
ಕಟಕ: ಕಾರ್ಯಕ್ಷೇತ್ರದಲ್ಲಿ ಕೆಲವು ಅಡತಡೆಗಳು ಆಗಬಹುದು. ಹಿರಿಯ ಅಧಿಕಾರಿಗಳಿಂದ ಸಹಾಯ ಮಾಡಲಿದ್ದಾರೆ. ಪ್ರಯಾಣ ಅಥವಾ ಪ್ರವಾಸದಲ್ಲಿ ಜಾಗ್ರತೆವಹಿಸಿ. ತಾರಾತುರಿಯಲ್ಲಿ ಯಾವುದೇ ಕೆಲಸಗಳು ಬೇಡ. ತಾಯಿಯವರ ಆರೋಗ್ಯದ ವ್ಯತ್ಯಾಸ ಆಗಲಿದೆ.
ಸಿಂಹ: ರಾಜಕಾರಣಿಗಳಿಗೆ ಶುಭವಿರುವ ದಿನ. ವ್ಯಾವಹಾರಿಕವಾಗಿ ದೊಡ್ಡ ಯೋಜನೆಗಳಿಗೆ ಚಾಲನೆ ಸಿಗಲಿದೆ. ಅನಗತ್ಯವಾದ ವಿಚಾರ, ವ್ಯಕ್ತಿಗಳು ನಿಮ್ಮಿಂದ ದೂರವಿದ್ದರೆ ಒಳ್ಳೆಯದು. ಚಿಂತಿಸಿದ ಕೆಲಸದ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತೀರಿ.
ಕನ್ಯಾ: ವ್ಯವಹಾರದ ದೃಷ್ಟಿಯಿಂದ ಪ್ರತಿಸ್ಪರ್ಧಿಗೆ ಅವಕಾಶ ಬೇಡ. ನೇರವಾಗಿ ಯಾರನ್ನು ನಿಷ್ಠೂರ ಮಾಡಿಕೊಳ್ಳಬೇಡಿ. ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ. ನಿಮ್ಮ ಸಾಮರ್ಥ್ಯ ಒಳ್ಳೆಯ ಕೆಲಸಕ್ಕೆ ಬಳಕೆಯಾಗಲಿದೆ. ಮಕ್ಕಳ ಚಿಂತನೆಯಿಂದ ನೀವು ಸೋಲುತ್ತೀರಿ.
ತುಲಾ: ಬಹು ನಿರೀಕ್ಷಿತ ಕೆಲಸಗಳು ಇಂದು ಪ್ರಾರಂಭವಾಗಲಿದೆ. ಮನೆ ಕೆಲಸದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಹೊಸ ಆಸ್ತಿ ಖರೀದಿಗೆ ಉತ್ತಮವಾದ ಸಮಯ. ಸೌಮ್ಯ ನಡವಳಿಕೆಯನ್ನು ಪ್ರಶಂಸೆ ಮಾಡಲಾಗುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುವ ಅವಕಾಶವಿದೆ.
ವೃಶ್ಚಿಕ: ಉದ್ಯೋಗದಲ್ಲಿ ಖ್ಯಾತಿ ಸಿಗಲಿದೆ. ಜನರು ನಿಮ್ಮಿಂದ ಸ್ಫೂರ್ತಿ ಪಡೆಯಬಹುದು. ಕಾನೂನು ವಿಚಾರವನ್ನು ಎದುರಿಸಬೇಕಾಗಲಿದೆ. ಸಹೋದ್ಯೋಗಿಗಳು ನಿಮ್ಮ ಸಿದ್ದಾಂತ ಒಪ್ಪುವುದಿಲ್ಲ. ಸಂತೋಷಕ್ಕಾಗಿ ಹಣ ಖರ್ಚು ಮಾಡುತ್ತೀರಿ.
ಧನಸ್ಸು: ದೊಡ್ಡ ಅಪಘಾತದ ಸುದ್ದಿ ಕೇಳುತ್ತೀರಿ. ಕೆಲವು ನಿರ್ಧಾರಗಳನ್ನು ಅನಿವಾರ್ಯವಾಗಿ ಮಾಡಬೇಕಾಗಲಿದೆ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಹಕ್ಕನ್ನು ಅಧಿಕಾರದಿಂದ ಚಲಾಯಿಸಬೇಡಿ. ಅಪರಿಚಿತರನ್ನು ನಂಬಬೇಡಿ.
ಮಕರ: ಸಾಂಸಾರಿಕ ಜೀವನದಲ್ಲಿ ಅನುಮಾನಕ್ಕೆ ಕಾರಣರಾಗುತ್ತೀರಿ. ಅವಿವಾಹಿತರಿಗೆ ಸ್ವಲ್ಪ ಸಮಸ್ಯೆಯ ದಿನ. ನಿಮ್ಮ ಯೋಜನೆಗಳು ಸ್ವಲ್ಪ ಗೊಂದಲವಿರಲಿದೆ. ಮಾತನ್ನು ತುಂಬಾ ಎಚ್ಚರಿಕೆಯಿಂದ ಆಡಿ. ತಂದೆಯವರ ಜೊತೆ ವ್ಯಾವಹಾರಿಕವಾದ ಭಿನ್ನಾಭಿಪ್ರಾಯ.
ಕುಂಭ: ನಿರೀಕ್ಷೆಗೂ ಮೀರಿದ ಸಂಪಾದನೆ ಮಾಡುತ್ತೀರಿ ಆದರೆ ಸಮಾಧಾನವಿಲ್ಲ. ಆಸ್ತಿಗೆ ಸಂಬಂಧಿಸಿದ ವಿವಾದಗಳು ಇತ್ಯರ್ಥವಾಗುವುದಿಲ್ಲ. ಸಾಂಸಾರಿಕವಾಗಿ ನಿಷ್ಠೂರವಾಗುತ್ತೀರಿ. ನ್ಯಾಯಾಂಗ ವಿಚಾರವಾಗಿ ಯಶಸ್ಸು ಕಾಣುತ್ತೀರಿ. ಮನೆಯಲ್ಲಿ ಹೊಂದಾಣಿಕೆಯಿರಲಿ.
ಮೀನ: ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಬೇಡ. ವೈದ್ಯಕೀಯ ರಂಗದವರಿಗೆ ಅದ್ಭುತವಾದ ದಿನ. ದೊಡ್ಡ ನಿರ್ಧಾರಗಳನ್ನು ಮಾಡಿ ಯಶಸ್ವಿದೆ. ಜನರಿಗೆ ಗೌರವವನ್ನು ಕೊಡುವ ಬಗ್ಗೆ ಚಿಂತನೆ ಮಾಡಿ. ವೈಯಕ್ತಿಕ ಪ್ರತಿಷ್ಠೆಗೆ ಬೇರೆಯವರ ದುರುಪಯೋಗ ಮಾಡಿಕೊಳ್ಳಬೇಡಿ.
PublicNext
05/02/2025 08:05 am