", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/222042-1738461102-Bhavishya-OK.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೇಷ ರಾಶಿ: ದಿನದ ಆರಂಭ ಚೆನ್ನಾಗಿರುತ್ತದೆ ನಂತರ ಸ್ವಲ್ಪ ವ್ಯತ್ಯಾಸ ಉಂಟಾಗಬಹುದು. ಯಾವುದು ಸಂತೋಷಕ್ಕೆ ಕಾರಣವೋ ಅದೇ ದುಃಖಕ್ಕೆ ಕಾರಣವಾಗಬಹುದು...Read more" } ", "keywords": "Daily Horoscope, Horoscope Today, February 2 2025, Astrology Predictions, Zodiac Signs, Daily Astrology, Sun Sign Horoscope, Star Sign Predictions, Astrological Forecast. ,,Astrology", "url": "https://publicnext.com/node" }
ಮೇಷ ರಾಶಿ: ದಿನದ ಆರಂಭ ಚೆನ್ನಾಗಿರುತ್ತದೆ ನಂತರ ಸ್ವಲ್ಪ ವ್ಯತ್ಯಾಸ ಉಂಟಾಗಬಹುದು. ಯಾವುದು ಸಂತೋಷಕ್ಕೆ ಕಾರಣವೋ ಅದೇ ದುಃಖಕ್ಕೆ ಕಾರಣವಾಗಬಹುದು. ಮನೆಯಲ್ಲಿ ಸ್ವಲ್ಪ ಹೊಂದಾಣಿಕೆ ಇರಲಿ. ವಿದ್ಯುತ್ ಉಪಕರಣ ಬಳಸುವಾಗ ಜಾಗೃತೆಯಿರಲಿ ತೊಂದರೆಯಾಗಬಹುದು.
ವೃಷಭ: ನಿಮ್ಮ ಒತ್ತಡವನ್ನ ಯಾವುದೇ ಕಾರಣಕ್ಕೂ ಬೇರೆಯವರ ಮೇಲೆ ಹಾಕಬೇಡಿ. ಕೆಲಸದ ಸ್ಥಳದಲ್ಲಿ ಎಲ್ಲವೂ ನಿಮ್ಮ ಪರವಾಗಿರಬಹುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಬಹುದು. ಇಂದು ತುಂಬಾ ಉತ್ತೇಜಕವಾದ ದಿನವಾಗಿರುತ್ತದೆ.
ಮಿಥುನ: ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭವಾಗಬಹುದು. ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಬಹುದು. ನಿಮ್ಮ ಆಲೋಚನೆಗಳಿಗೆ ಜನಮಾನ್ಯತೆ ಇರುತ್ತದೆ. ನಿಮ್ಮ ಖರ್ಚಿನ ಮೇಲೆ ನಿಯಂತ್ರಣವಿರಲಿ.
ಕಟಕ: ಅನಗತ್ಯ ವಿಚಾರಗಳಿಗೆ ಸಮಯ ವ್ಯರ್ಥ ಮಾಡಬಹುದು. ಕುಟುಂಬ ಸದಸ್ಯರ ಭಾವನೆಗಳಿಗೆ ಸ್ಪಂದಿಸಿ. ನೌಕರರಿಗೆ ಉತ್ತಮವಾದ ದಿನ. ನಿಮ್ಮ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ಗಮನಿಸಿಕೊಳ್ಳಿ. ತಾಳ್ಮೆ ತುಂಬಾ ಅಗತ್ಯ ಎನ್ನಿಸಬಹುದು.
ಸಿಂಹ: ಹೊಸಬರ ಪರಿಚಯಕ್ಕೆ ಅವಕಾಶವಿದೆ. ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವಿದೆ. ವ್ಯಾವಹಾರಿಕವಾಗಿ ಉತ್ತಮ ಸಾಧನೆ ಮಾಡಬಹುದು. ಪ್ರೇಮಿಗಳಿಗೆ ಶುಭ ದಿನ. ನಿಮ್ಮ ಜಾಣ್ಮೆ ಪ್ರಶಂಸಿಸಲ್ಪಡಬಹುದು.
ಕನ್ಯಾ: ಇಂದು ಯಾವುದೇ ರೀತಿಯ ಹೊಸ ಕೆಲಸ ಪ್ರಾರಂಭಿಸಬೇಡಿ. ಮೇಲಾಧಿಕಾರಿಗಳ ಅಥವಾ ಹಿರಿಯರ ಆದೇಶವನ್ನು ಧಿಕ್ಕರಿಸಬೇಡಿ. ಸಾಯಂಕಾಲದ ವೇಳೆಗೆ ಒತ್ತಡದಿಂದ ಸ್ವಲ್ಪ ಆರಾಮ ಸಿಗಬಹುದು. ಹೊಟ್ಟೆ ನೋವಿನ ಸಮಸ್ಯೆ ಕಾಡಬಹುದು.
ತುಲಾ: ಹೊಸ ವೃತ್ತಿ ಅಥವಾ ಉದ್ಯೋಗ ವಿಚಾರ ಪ್ರಸ್ತಾಪ ಮಾಡಬಹುದು. ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮವಾದ ಸಮಯ. ಗೌರವಾನ್ವಿತ ಜನರ ಜೊತೆ ನಿಮ್ಮ ಪ್ರಭಾವ ಬಲಗೊಳ್ಳಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಹೊಂದುತ್ತೀರಿ.
ವೃಶ್ಚಿಕ: ಇಂದು ನಿಮ್ಮ ವಿರೋಧಿಗಳನ್ನು ತಾತ್ಸಾರ ಮಾಡಬೇಡಿ. ನೀವು ಖಿನ್ನತೆಗೆ ಒಳಗಾಗಬಹುದು. ವ್ಯವಹಾರಿಕವಾಗಿ ನಿರೀಕ್ಷಿತ ಫಲಿತಾಂಶ ಸಿಗದೇ ಬೇಸರವಾಗಬಹುದು. ಇಂದು ಯೋಗ್ಯವಲ್ಲದ ಯಾವ ವ್ಯವಹಾರವನ್ನ ಮಾಡಬೇಡಿ.
ಧನಸ್ಸು: ನಿಮ್ಮ ಬಾಕಿ ಇರುವ ಕೆಲಸಗಳೆಲ್ಲ ಪೂರ್ಣಗೊಳ್ಳಬಹುದು. ವ್ಯವಹಾರದಲ್ಲಿ ಹೊಸ ಒಪ್ಪಂದಗಳಾಗುವ ಸಾಧ್ಯತೆಯಿದೆ. ಎಲ್ಲಾ ಕಡೆಯಿಂದ ಶುಭ ಸುದ್ದಿ ಕೇಳಬಹುದು. ಸಹೋದರ ವರ್ಗದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಆತ್ಮವಿಶ್ವಾಸದಿಂದ ಕೆಲಸ ಮಾಡಿ ಜಯವಿದೆ.
ಮಕರ: ನಿಮ್ಮ ಕಾರ್ಯಶೈಲಿಯಿಂದ ನೀವು ತೃಪ್ತರಾಗುತ್ತೀರಿ. ಪ್ರೇಮಿಗಳಿಗೆ ಶುಭವಾದ ದಿನ. ಕುಟುಂಬ ಸದಸ್ಯರ ಅಸಹಕಾರದಿಂದ ತೊಂದರೆಯಾಗಬಹುದು. ನಿಮ್ಮ ಆದಾಯದ ಮೂಲ ಗಮನಿಸಿಕೊಳ್ಳಿ.ಸಮಾಜಕ್ಕೆ ಕೆಲವು ವಿಚಾರಗಳಲ್ಲಿ ಉತ್ತರ ಕೊಡುವ ಪರಿಸ್ಥಿತಿ ಬರಬಹುದು.
ಕುಂಭ: ಇಂದು ಮನೆಯ ಯಾವುದೇ ವಿಚಾರಗಳು ಹೊರ ಹೋಗಬಾರದು. ವ್ಯಾವಹಾರಿಕವಾಗಿ ಲಾಭದ ದಿನ. ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳೇ ಹೆಚ್ಚು ಬರಬಹುದು. ಉನ್ನತ ಶಿಕ್ಷಣದಲ್ಲಿ ಯಶಸ್ಸು ಕಾಣುವ ಅವಕಾಶವಿದೆ. ಹೊಸ ಕೆಲಸ ಆರಂಭಿಸುವ ಆಸೆ ಪೂರೈಸಬಹುದು.
ಮೀನ: ಅನಗತ್ಯವಾದ ಖರ್ಚಿಗೆ ಕಡಿವಾಣ ಹಾಕಿ. ನಿಮ್ಮ ಸುತ್ತಮುತ್ತಲ ಜನರ ಬಗ್ಗೆ ಜಾಗೃತೆಯಿರಲಿ. ಆಯಾಸದಿಂದ ನಿಮ್ಮ ಕೆಲಸದ ಬಗ್ಗೆ ಗಮನ ಹರಿಸಲು ಆಗುವುದಿಲ್ಲ. ಹಣದ ವಿಚಾರದಲ್ಲಿ ನಿರ್ಲಕ್ಷ ವಹಿಸಬೇಡಿ.
PublicNext
02/02/2025 07:22 am