ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 04-02-2025

ಮೇಷ ರಾಶಿ: ಇಂದು ಕಾನೂನು ವಿಚಾರಗಳಲ್ಲಿ ಜಯವಿದೆ. ಸಾಂಸಾರಿಕವಾಗಿ ಬಲವಿರುವ ದಿನ. ನಿಮ್ಮ ವ್ಯವಹಾರವನ್ನು ವಿಸ್ತಾರ ಮಾಡಿಕೊಳ್ಳಬಹುದು. ಸಮಾಜಮುಖಿ ಕೆಲಸಗಳಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳುವ ಯೋಗವಿದೆ.

ವೃಷಭ: ವ್ಯವಹಾರದಲ್ಲಿ ಅಸಮಾಧಾನದ ದಿನ. ಅನಗತ್ಯವಾದ ಖರ್ಚುಗಳನ್ನು ನಿಯಂತ್ರಿಸಿ. ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯುವುದಿಲ್ಲ. ಮಕ್ಕಳ ಬಗ್ಗೆ ದೊಡ್ಡದಾದ ಆಲೋಚನೆಯಿಂದ ಲಾಭವಿದೆ. ನಿಮ್ಮ ಕೆಲಸ ಕಾರ್ಯಗಳನ್ನು ಪ್ರಶಂಸಿಸಲಾಗುತ್ತದೆ.

ಮಿಥುನ: ಕೆಲಸದಲ್ಲಿ ಬಡ್ತಿಗೆ ಅವಕಾಶವಿದೆ. ಸ್ನೇಹಿತರ ಜೊತೆ ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಿ. ಮಕ್ಕಳ ತಪ್ಪುಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಪ್ರೇಮಿಗಳಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಕೆಲಸದಲ್ಲಿ ಜನ ತಪ್ಪನ್ನ ಕಂಡು ಹಿಡಿತಿರ್ತಾರೆ ಗಮನಿಸಿಕೊಳ್ಳಿ.

ಕಟಕ: ಕೈ ಹಾಕಿದ ಕೆಲಸವನ್ನು ಪೂರ್ಣವಾಗುವವರೆಗೂ ಬಿಡಬೇಡಿ. ಕಾನೂನು ವಿಚಾರಗಳಲ್ಲಿ ಹಿನ್ನಡೆಯಾಗಬಹುದು. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುವವರಿಗೆ ಲಾಭದ ದಿನ. ಕಾಲು ನೋವಿನ ಸಮಸ್ಯೆ ಕಾಡಬಹುದು. ಕೆಲಸದ ಶೈಲಿಯನ್ನ ಬದಲಾಯಿಸುವ ಅಭ್ಯಾಸ ಮಾರಕವಾಗಬಹುದು.

ಸಿಂಹ: ಸಾಂಸಾರಿಕ ಜೀವನದಲ್ಲಿ ಅಸಮಾಧಾನಕರ ವಾತಾವರಣ ಇರುತ್ತದೆ. ಕುಟುಂಬದವರ ಜೊತೆ ಪ್ರವಾಸಕ್ಕೆ ಸಿದ್ಧರಾಗಬಹುದು. ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಲಾಭವಾಗುವ ಅವಕಾಶವಿದೆ. ಹಲವರು ನಿಮ್ಮ ಜೊತೆ ಕೆಲ ವಿಚಾರಗಳನ್ನ ಚರ್ಚಿಸಬಹುದು.

ಕನ್ಯಾ: ಆರ್ಥಿಕವಾಗಿ ದುರ್ಬಲರಾಗುತ್ತೀರಿ. ವಾಹನ ಚಾಲನೆಯಲ್ಲಿ ಜಾಗ್ರತೆಯಿರಲಿ. ಪ್ರೇಮಿಗಳಲ್ಲಿ ಪರಸ್ಪರ ಜಗಳವಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ ಉಂಟಾಗಬಹುದು. ಅಪರಿಚಿತರ ಜೊತೆ ಸ್ನೇಹ ಬೇಡ ಮೋಸ ಹೋಗಬಹುದು.

ತುಲಾ: ಕೆಲಸದ ಸ್ಥಳದಲ್ಲಿ ನಿಮ್ಮ ಚಟುವಟಿಕೆ ತುಂಬಾ ಹೆಚ್ಚಾಗಿರುತ್ತದೆ. ವ್ಯಾವಹಾರಿಕವಾಗಿ ಲಾಭಗಳಿಸುತ್ತೀರಿ. ಆರೋಗ್ಯದ ಬಗ್ಗೆ ಸ್ವಲ್ಪ ಗಮನಿಸಿಕೊಳ್ಳಿ ತಾತ್ಸಾರ ಬೇಡ. ವೃತ್ತಿಯ ತೊಡಕುಗಳು ನಿವಾರಣೆಯಾಗುತ್ತವೆ. ಬಂಧುಗಳಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ.

ವೃಶ್ಚಿಕ: ಸಹೋದ್ಯೋಗಿಗಳು ಕೆಲಸದಲ್ಲಿ ನಿಮ್ಮ ಬಗ್ಗೆ ಅಸಮಾಧಾನ ಗೊಳ್ಳಬಹುದು. ವಿರೋಧಿಗಳಿಂದ ಹಾನಿ ಸಂಭವ ಇದೆ. ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿಗೆ ಅವಕಾಶವಿದೆ. ಇಂದು ಶರೀರದಲ್ಲಿ ಸುಖವಿಲ್ಲ. ನಿಮ್ಮ ಹಳೆಯ ಯೋಚನೆಗಳನ್ನು ಮರೆತು ಹೊಸತನ್ನ ಯೋಚನೆ ಮಾಡಿ.

ಧನಸ್ಸು: ನೀವಿರುವ ಪರಿಸರ ಚೆನ್ನಾಗಿದೆ ಅದರ ಸದ್ವಿನಿಯೋಗ ಮಾಡಿಕೊಳ್ಳಿ. ಸಾರ್ವಜನಿಕ ಸ್ಥಳದಲ್ಲಿ ಕಿರಿಕಿರಿ ಎನಿಸಬಹುದು. ಕುಟುಂಬ ಸದಸ್ಯರ ಬಗ್ಗೆ ಕಾಳಜಿವಹಿಸಿ. ನಿಮ್ಮ ಆಲೋಚನೆಗಳೇ ಬೇರೆ ನಡೆಯುವ ಕೆಲಸಗಳೇ ಬೇರೆ ಎಂಬ ಪರಿಸ್ಥಿತಿ ಇರುತ್ತದೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಗಮನಿಸಿ.

ಮಕರ: ದಿನ ಚೆನ್ನಾಗಿರುವಂತೆ ಭಾಸವಾಗುತ್ತೆ ಆದರೆ ಗಮನಿಸಿಕೊಳ್ಳಿ. ಅಪೂರ್ಣ ಕೆಲಸಕ್ಕೆ ಚಾಲನೆ ಸಿಗಬಹುದು. ವ್ಯಾವಹಾರಿಕ ಸಮಸ್ಯೆಗಳು ದೂರವಾಗಬಹುದು. ಜೀವನ ಶೈಲಿಯಲ್ಲಿ ಬದಲಾವಣೆಯ ಪರ್ವ. ಬೇರೆಯವರ ಬಗ್ಗೆ ಅಸೂಯೆ ಬಿಡಬೇಕು.

ಕುಂಭ: ಸಾಂಸಾರಿಕ ಭಿನ್ನಾಭಿಪ್ರಾಯಗಳು ದೂರವಾಗಬಹುದು. ಕಾರಣಾಂತರಗಳಿಂದ ಸರ್ಕಾರಿ ಉದ್ಯೋಗದಲ್ಲಿ ಹಿನ್ನಡೆ. ಸಹೋದ್ಯೋಗಿಗಳೊಂದಿಗೆ ನೀವು ಸಮಾಧಾನವಾಗಿರುವುದಿಲ್ಲ. ತಂದೆಯವರ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ.

ಮೀನ : ನಿಮ್ಮ ಜವಾಬ್ದಾರಿಯನ್ನು ಮರೆಯ ಬೇಡಿ. ಹಿಂದಿನ ಅನುಭವದ ಲಾಭ ಸರಿಯಾಗಿ ಸಿಗುತಿಲ್ಲ. ಎಲ್ಲ ವಿಚಾರಗಳಲ್ಲೂ ಕೋಪ ಮಾಡಿಕೊಳ್ಳಬಹುದು. ಮಾತಿನ ಬಗ್ಗೆ ಹಿಡಿತವಿದ್ದರೆ ಒಳ್ಳೆಯದು. ಆಹಾರದಲ್ಲಿ ವ್ಯತ್ಯಾಸವಾಗದಂತೆ ಗಮನಿಸಿಕೊಳ್ಳಿ.

Edited By : Vijay Kumar
PublicNext

PublicNext

04/02/2025 08:13 am

Cinque Terre

19.13 K

Cinque Terre

0