", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/222042-1738548818-Bhavishya-OK.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೇಷ ರಾಶಿ: ಆಹಾರ ವ್ಯತ್ಯಾಸದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ. ಪ್ರೇಮಿಗಳಲ್ಲಿ ಪರಸ್ಪರ ಅಸಮಾಧಾ...Read more" } ", "keywords": "Horoscope today, daily horoscope, astrology forecast, zodiac signs, rashifal, daily predictions, 03-02-2025 horoscope, February 3 horoscope, Indian astrology, daily astrology update. ,,Astrology", "url": "https://publicnext.com/node" } ದಿನ ಭವಿಷ್ಯ: 03-02-2025
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 03-02-2025

ಮೇಷ ರಾಶಿ: ಆಹಾರ ವ್ಯತ್ಯಾಸದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ. ಪ್ರೇಮಿಗಳಲ್ಲಿ ಪರಸ್ಪರ ಅಸಮಾಧಾನವಿರಲಿದೆ. ಬೇರೆಯವರಿಂದ ನೀವು ಸಾಲವನ್ನು ಮಾಡಬೇಡಿ.

ವೃಷಭ: ವ್ಯಾವಹಾರಿಕವಾಗಿ ಅಭಿವೃದ್ಧಿ ಇರಲಿದೆ. ಸಣ್ಣ ತಪ್ಪುಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಕಾರ್ಯ ಕ್ಷೇತ್ರದಲ್ಲಿ ಹೆಚ್ಚು ಗಮನಹರಿಸಿ. ಆರ್ಥಿಕವಾಗಿ ಕೆಲವು ಲೆಕ್ಕಾಚಾರಗಳು ನಡೆಯಲಿದೆ. ಮನೆಯಲ್ಲಿ ಸಂತೋಷವನ್ನು ಕಾಪಾಡಿಕೊಳ್ಳಿ.

ಮಿಥುನ: ವ್ಯಾವಹಾರಿಕವಾಗಿ ಅಭಿವೃದ್ಧಿ ಇದೆ. ಕುಟುಂಬದವರ ಸಂಪೂರ್ಣ ಸಹಕಾರವಿದೆ. ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿ. ನಿಮ್ಮ ಅಡೆತಡೆಗಳು ನಿವಾರಣೆಯಾಗಲಿದೆ. ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ.

ಕಟಕ: ವ್ಯವಹಾರದಿಂದ ಹಣ ಸಿಗಲಿದೆ ಆದರೆ ಸಮಾಧಾನವಿಲ್ಲ. ನಿಮ್ಮೆಲ್ಲ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ. ಕಷ್ಟ ಪಟ್ಟ ಕೆಲಸಕ್ಕೆ ಧನಾತ್ಮಕ ಫಲಿತಾಂಶವಿದೆ. ಆಸ್ತಿಯ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು. ನವಗ್ರಹರನ್ನು ಪ್ರಾರ್ಥನೆ ಮಾಡಿ.

ಸಿಂಹ: ಧನ ಲಾಭವಿದೆ ಹಲವು ದಿನಗಳ ಆಸೆ ಪೂರೈಸಲಿದೆ. ಭೂ ಲಾಭದ ಯೋಗವಿದೆ. ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಆದ್ಯತೆ ನೀಡಿ. ವೃತ್ತಿ ಅಥವಾ ಉದ್ಯೋಗದಲ್ಲಿ ಗಣನೀಯವಾದ ಬೆಳವಣೆಗೆ ಇರಲಿದೆ. ಸಮಾಜಮುಖಿ ಕೆಲಸದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತೀರಿ.

ಕನ್ಯಾ: ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ. ಅಧಿಕ ಒತ್ತಡದಿಂದ ದೇಹಾಲಸ್ಯ ಆಗಬಹುದು. ವೈದ್ಯರ ಸಲಹೆ ಮೀರಿ ಔಷಧೋಪಚಾರಗಳನ್ನು ಮಾಡಬೇಡಿ. ಆರೋಗ್ಯ ತುಂಬಾ ಹದಗೆಡುತ್ತಿದೆ ಎಚ್ಚರಿಕೆವಹಿಸಿ.

ತುಲಾ: ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹಣ ಖರ್ಚು ಮಾಡುತ್ತೀರಿ. ಹೊಸ ವಾಹನ ಖರೀದಿಯ ವಿಚಾರ ಮಾಡುತ್ತೀರಿ. ಸ್ನೇಹಿತರ ಜೊತೆಯಲ್ಲಿ ಸಂಭಾಷಣೆ ಮಾಡುತ್ತೀರಿ ಸೂಕ್ತ ಸಲಹೆ ಕೊಡುತ್ತೀರಿ. ಸಾಲ ಮರುಪಾವತಿ ವಿಚಾರದಲ್ಲಿ ಸಮಾಧಾನ.

ವೃಶ್ಚಿಕ: ವ್ಯವಹಾರಸ್ಥರಿಗೆ ಸ್ವಲ್ಪ ಗೊಂದಲವಿದೆ ನಿವಾರಣೆ ಮಾಡಿಕೊಳ್ಳಿ. ಮಕ್ಕಳು ಮತ್ತು ಪೋಷಕರ ನಡುವೆ ಕಿರಿಕಿರಿಯಾಗಬಹುದು. ತಲೆನೋವು ಅಥವಾ ಕಣ್ಣಿನ ಸಮಸ್ಯೆ ಕಾಡಬಹುದು. ವೈರಾಗ್ಯದ ಮಾತುಗಳು ಹೊರಬರಲಿದೆ.

ಧನಸ್ಸು: ಪ್ರಯಾಣದಿಂದ ತೊಂದರೆಯಾಗಬಹುದು. ಸಹೋದರಿಯಿಂದ ಸ್ವಲ್ಪ ಸಮಸ್ಯೆಯಾಗಬಹುದು. ಹಿರಿಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ಬಂಧುಗಳ ಜೊತೆ ಜಗಳವಾಗಬಹುದು.

ಮಕರ: ವಿದ್ಯಾರ್ಥಿಗಳಿಗೆ ಹಲವಾರು ಸಮಸ್ಯೆಗಳು ಉಂಟಾಗಬಹುದು. ತಂದೆ ತಾಯಿಯ ಹಣ ಅಥವಾ ವಸ್ತು ದುರುಪಯೋಗ ಆಗಬಹುದು. ದಾಂಪತ್ಯದಲ್ಲಿ ವಿರಸ ಉಂಟಾಗಬಹುದು. ಶತ್ರುಗಳ ಜೊತೆ ಮಾತಿನ ಸಮರ ಆಗಲಿದೆ. ಭೂ ವ್ಯವಹಾರದಲ್ಲಿ ಸೋಲಾಗಬಹುದು.

ಕುಂಭ: ವ್ಯಾವಹಾರಿಕವಾಗಿ ಮುನ್ನಡೆಯಿದೆ. ಸಮಾಧಾನದಿಂದ ಏನನ್ನಾದರೂ ಸಾಧಿಸಬಹುದು ಕೋಪ ಬೇಡ. ಯಾವುದಕ್ಕೂ ಹಿರಿಯರ ಮಾರ್ಗದರ್ಶನವಿರಲಿ. ಸ್ವಂತ ಬುದ್ಧಿ ಮಂಕಾಗುವ ಸಾಧ್ಯತೆ ಇದೆ.

ಮೀನ: ಶತ್ರುಗಳ ವಿರುದ್ಧ ಜಯ ಸಾಧಿಸುತ್ತೀರಿ. ಹೃದ್ರೋಹಿಗಳಿಗೆ ಸಮಸ್ಯೆ ಕಾಡಬಹುದು. ಒತ್ತಡದ ಬದುಕು ಬಹಳ ಬೇಸರ ತರಲಿದೆ. ಸರ್ಕಾರಿ ಕೆಲಸಗಳಲ್ಲಿ ವಿಘ್ನ ಆಗಬಹುದು.

Edited By : Vijay Kumar
PublicNext

PublicNext

03/02/2025 07:44 am

Cinque Terre

17.78 K

Cinque Terre

0