", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/405356-1737353028-ex.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VinayakHubballi" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "Exclusive ಹುಬ್ಬಳ್ಳಿ:ಚಲಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಸ್ಕೂಟಿ ಡಿಕ್ಕಿ ಹೊಡೆದಿದೆ. ಪರಿಣಾಮ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್...Read more" } ", "keywords": "Hubballi, Scooty-Tractor Collision, Student Killed, Road Accident, Karnataka News, Hubli-Dharwad, Traffic Mishap, Fatal Crash, Student Death, Scooter Accident.,Hubballi-Dharwad,Accident", "url": "https://publicnext.com/node" }
Exclusive
ಹುಬ್ಬಳ್ಳಿ:ಚಲಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಸ್ಕೂಟಿ ಡಿಕ್ಕಿ ಹೊಡೆದಿದೆ. ಪರಿಣಾಮ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಾಗೂ ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಹಿಂಬಾಗದಲ್ಲಿ ನಡೆದಿದೆ.
ತೊರವಿ ಹಕ್ಕಲ ಕಡೆಯಿಂದ ಪೈ ಹೋಟೆಲ್ ಕಡೆಗೆ ಬರುತ್ತಿದ್ದ ಪಾಲಿಕೆಯ ಕಸ ಸಂಗ್ರಹದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಸ್ಕೂಟಿಯಲ್ಲಿ ಜೋರಾಗಿ ಬರುತ್ತಿದ್ದ 18 ವರ್ಷದ ಅದ್ವೈತ ಸ್ಕೂಟಿ ನಿಯಂತ್ರಣ ಮಾಡಲಾಗದೇ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಏಟಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಹಿಂಬದಿ ಕುಳಿತಿದ್ದ ವಿವೇಕನಿಗೂ ಗಾಯವಾಗಿದ್ದು ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದ್ವೈತ ತಲೆಗೆ ಹೆಲ್ಮೆಟ್ ಹಾಕದೆ ಇದ್ದ ಕಾರಣ ತಲೆಗೆ ಬಲವಾದ ಏಟು ಬಿದ್ದು ಸಾವನ್ನಪ್ಪಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಶವವನ್ನು ಹುಬ್ಬಳ್ಳಿಯ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.
ಪೋಷಕರು ತಮ್ಮ ತಮ್ಮ ಮಕ್ಕಳಿಗೆ ದ್ವಿಚಕ್ರ ವಾಹನಗಳನ್ನು ಕೊಡುವ ಮುನ್ನ ನೂರು ಸಾರಿ ಯೋಚಿಸಬೇಕಿದೆ. ತೀರಾ ಅಗತ್ಯವಿದ್ದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಲು ಕೊಡುವುದು ಉತ್ತಮ. ಸಂಚಾರಿ ನಿಯಮ ಕಾಪಾಡೋದು ಕೇವಲ ಸಂಚಾರಿ ಪೊಲೀಸರಿಗೆ ಮಾತ್ರವೇ ಅನ್ವಯಿಸುವುದಿಲ್ಲ. ಬದಲಿಗೆ ಅದು ನಮ್ಮೆಲ್ಲರ ಜವಾಬ್ದಾರಿ ಕೂಡ ಹೌದು. ಯಾಕಂದ್ರೆ ಒಮ್ಮೆ ಹೋದ ಪ್ರಾಣ ಎಷ್ಟು ದಂಡ ಕಟ್ಟಿದರೂ ಮರಳಿ ಬಾರದು.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/01/2025 11:34 am