ಶೃಂಗೇರಿ: ಶಾರದಾ ಪೀಠದ ಪಕ್ಕದಲ್ಲೇ ಹರಿಯುವ ತುಂಗೆಯ ಒಡಲಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ.
ಅದು ಶೃಂಗೇರಿ ದೇಗುಲಕ್ಕೆ ಬರುವ ಭಕ್ತರ ವಾಹನದ ಪಾರ್ಕಿಂಗ್ ಜಾಗ ಗಾಂಧಿ ಮೈದಾನದಲ್ಲಿ, ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬ ಹಗಲಿನಲ್ಲಿ ನದಿಯಿಂದ ಮರಳನ್ನು ತೆಗೆದು ಹಾಕಿ ರಾತ್ರಿ ವೇಳೆ ಕೊಪ್ಪ, ಜಯಪುರ, ಬಾಳೆಹೊನ್ನೂರು ಭಾಗಗಳಿಗೆ ಮರಳು ಸಾಗಾಟ ಮಾಡುತ್ತಿರುವ ಆರೋಪಗಳು ಕೇಳಿ ಬಂದಿದೆ.
ಇಷ್ಟೆಲ್ಲ ನಡೆದ್ರು ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಅಂತಾ ಸುಮ್ಮನಿದ್ದು, ಮರಳು ಸಾಗಿಸುವ ಪ್ರಭಾವಿ ವ್ಯಕ್ತಿಯು ಅಧಿಕಾರಿಗಳಿಗೆ ಸಮ್ ಥಿಂಗ್ ನೀಡಿ ರಾಜಾರೋಷವಾಗಿ ಮರಳು ಸಾಗಿಸುತ್ತಿದ್ದಾನೆ ಅಂತ ಶೃಂಗೇರಿಯಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ.
PublicNext
20/01/2025 08:29 am