ಕಡೂರು: ಬೋರ್ ವೆಲ್ ಗೆ ವಿದ್ಯುತ್ ಲೈನ್ ಅಳವಡಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಲ್ಲೇಶಪ್ಪ (55) ಮೃತ ದುರ್ದೈವಿ. ಕಲ್ಲೇಶಪ್ಪ ಒಂದೇ ತೋಟದಲ್ಲಿ ಎರಡು ಬೋರುವೆಲ್ ತೆಗೆಸಿದ್ದು, ಟಿಸಿಯಿಂದ ವಿದ್ಯುತ್ ಲೈನ್ ಎಳೆದುಕೊಂಡು ಒಂದು ಬೋರ್ವೆಲ್ ಮೂಲಕ ತೋಟಕ್ಕೆ ನಿರಾಯಿಸುತ್ತಿದ್ದ. ನಂತರ ಅದೇ ಟಿ.ಸಿಯಿಂದ ಮತ್ತೊಂದು ಬೋರ್ ವೆಲ್ʼಗೆ ಕರೆಂಟ್ ಎಳೆದುಕೊಳ್ಳಲು ಯತ್ನಿಸಿದ್ದು ಇದನ್ನು ಪ್ರಶ್ನಿಸಿದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ.
ಗಲಾಟೆಯೂ ಹೆಚ್ಚಾಗಿ ಕಲ್ಲೇಶಪ್ಪನ ಮೇಲೆ ಹಲ್ಲೆ ನಡೆದಿದ್ದು, ಜನವರಿ 31 ರಂದು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಕಲ್ಲೇಶಪ್ಪ ನೆನ್ನೆ ರಾತ್ರಿ ಸಾವನಪ್ಪಿದ್ದಾರೆ. ಸದ್ಯ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಂತಪುರ ಗ್ರಾಮದ ನಾಗರಾಜಪ್ಪ, ಲೋಹಿತ್ ಹಾಗೂ ಗಂಗಾಧರಪ್ಪ ಮೇಲೆ ಕೊಲೆ ಆರೋಪ ಮಾಡಲಾಗಿದೆ.
Kshetra Samachara
02/02/2025 07:24 pm