ಚಿಕ್ಕಮಗಳೂರು: ಜನವರಿ 8ರಂದು ಮುಖ್ಯಮಂತ್ರಿಗಳ ಮುಂದೆ ಶರಣಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದ ಆರು ನಕ್ಸಲರ ನಂತರ ಇಂದು ಕಾಡಿನಲ್ಲಿದ್ದ ಕೊನೆಯ ನಕ್ಸಲ ಕೋಟೆಹೊಂಡ ರವೀಂದ್ರ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ.
ಶರಣಾಗತಿಯ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ರವೀಂದ್ರ, ನಾನು ನನ್ನ ಸ್ವಂತ ಇಚ್ಛೆಯಿಂದ ಶರಣಾಗಿದ್ದೇನೆ. ಶರಣಾಗತಿಯಾಗಲು ಯಾರ ಒತ್ತಡವು ಇರಲಿಲ್ಲ. ನಾನು ಸರ್ಕಾರ ಹಾಗೂ ಜಿಲ್ಲಾಡಳಿತದ ಮುಂದೆ ಬೇಡಿಕೆಗಳನ್ನು ಇಟ್ಟಿದ್ದೇನೆ. ನಮ್ಮ ಊರಿಗೆ ಸರಿಯಾದ ರಸ್ತೆಗಳಿಲ್ಲ, ಗ್ರಾಮಸ್ಥರಿಗೆ ಹಕ್ಕು ಪತ್ರಗಳನ್ನು ನೀಡಿಲ್ಲ. ಅಲ್ಲಿರುವ ಸ್ಥಳೀಯರಿಗೆ ಕಾಡಿನಲ್ಲಿರುವ ಉತ್ಪನ್ನಗಳನ್ನು ಬಳಸಿಕೊಳ್ಳಲು ಅವಕಾಶ ಕೊಡಬೇಕು ಎಂದು ಜಿಲ್ಲಾಡಳಿತದ ಮುಂದೆ ಶರಣಾಗಿರುವ ನಕ್ಸಲ ರವೀಂದ್ರ ಮನವಿ ಮಾಡಿಕೊಂಡಿದ್ದಾರೆ.
PublicNext
01/02/2025 05:18 pm