ಚಿಕ್ಕಮಗಳೂರು: ಸರಕಾರವೇ ನಿಷೇಧ ಮಾಡಿರುವ ಕ್ಯಾಟ್ ಫಿಶ್‌ಗಳು ಇನ್ನೂ ಚಿಕ್ಕಮಗಳೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದ ವಾರದ ಸಂತೆಗಳಲ್ಲಿ ಮಾರಾಟಗೊಳ್ಳುತ್ತಿವೆ.
ಸರ್ಕಾರ ಈ ಮೀನು ತಳಿಯನ್ನು ಸಾಕಾಣಿಕೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿದೆ. ಈ ಸಂತತಿಯ ಮೀನುಗಳು ಮಾಂಸಹಾರಿಗಳಾಗಿದ್ದು ನೀರಿನಲ್ಲಿರುವ ಇತರೆ ಎಲ್ಲಾ ರೀತಿಯ ಜಲಚರಗಳನ್ನು ಭಕ್ಷಿಸಿ ಅವುಗಳನ್ನು ಅಳಿವಿನ ಅಂಚಿಗೆ ತಳ್ಳುತ್ತವೆ ಹಾಗೂ ಈ ಮೀನುಗಳನ್ನು ಸಾಕಲು ಕೋಳಿ ತ್ಯಾಜ್ಯವನ್ನು ಬಳಕೆ ಮಾಡಲಾಗುತ್ತದೆ ಎಂದು ಸರ್ಕಾರ ಕ್ಯಾಟ್ ಫಿಶ್‌ಗಳನ್ನು ನಿಷೇಧಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಕಾಫಿ ಎಸ್ಟೇಟ್‌ಗಳಿಗೆ ಕೆಲಸಕ್ಕೆ ಬಂದಿರುವ ವಲಸಿಗರು ಸ್ಥಳೀಯವಾಗಿ ನಡೆಯುವ ವಾರದ ಸಂತೆಗಳಿಗೆ ಹೋಗಿ ಕ್ಯಾಟ್ ಫಿಶ್‌ಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಹೀಗಾಗಿ ವ್ಯಾಪಾರಿಗಳು ನಿಷೇಧಿತ ಈ ಮೀನನ್ನು ತಂದು ಮಾರಾಟ ಮಾಡುತ್ತಿದ್ದು ಈ ಕುರಿತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಕ್ಯಾಟ್ ಫಿಶ್‌ಗಳು ಎಲ್ಲಿಂದ ಪೂರೈಕೆ ಆಗುತ್ತಿವೆ ಎಂದು ಪತ್ತೆ ಹಚ್ಚಿ ಇದಕ್ಕೆ ಕಡಿವಾಣ ಹಾಕಬೇಕಿದೆ.
Kshetra Samachara
20/01/2025 08:26 am