", "articleSection": "Politics,News,Public News", "image": { "@type": "ImageObject", "url": "https://prod.cdn.publicnext.com/s3fs-public/40274420250119042113filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Kaveri Hosadurg" }, "editor": { "@type": "Person", "name": "6362053469" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸದುರ್ಗ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ಣವಾಗುವ ಮೊದಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರ...Read more" } ", "keywords": "Node,Chitradurga,Politics,Public-News,News Hosadurga, Minister, MLA, Infighting, Karnataka Politics, Congress, JD(S), BJP, Political Tussle.,News", "url": "https://publicnext.com/node" } ಹೊಸದುರ್ಗ : ಸಚಿವ ಮತ್ತು ಶಾಸಕರ ನಡುವೆ ತಣ್ಣಗಾಗದ ಒಳಜಗಳ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ : ಸಚಿವ ಮತ್ತು ಶಾಸಕರ ನಡುವೆ ತಣ್ಣಗಾಗದ ಒಳಜಗಳ

ಹೊಸದುರ್ಗ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ಣವಾಗುವ ಮೊದಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮತ್ತು ಜಿಲ್ಲೆಯ ಕೆಲ ಕಾಂಗ್ರೆಸ್ ಶಾಸಕರ ಮಧ್ಯೆ ವಿವಿಧ ವಿಚಾರಗಳಿಗೆ ಸಂಘರ್ಷ ಏರ್ಪಟ್ಟಿದೆ ಎಂಬ ಮಾತುಗಳು ಕೇಳಿ ಬಂದವು. ಆದ್ದರಿಂದ ಸಚಿವರು ಮತ್ತು ಶಾಸಕರ ನಡುವಿನ ಒಳಜಗಳದ ಬೇಗುದಿ ವಿವಿಸಾಗರ ಜಲಾಶಯ ವಿಚಾರವಾಗಿ ಬಹಿರಂಗಗೊಂಡಿದೆ.

ಜಿಲ್ಲಾ ಡಿಸಿಸಿ ಬ್ಯಾಂಕ್ ವಿಚಾರಕ್ಕೆ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯ ವಾತಾವರಣದಲ್ಲಿಯೇ ಬಾಗಿನ ಅರ್ಪಿಸುವ ಸಿಎಂ ಕಾರ್ಯಕ್ರಮಕ್ಕೂ ಬಿಸಿ ತಟ್ಟಿದಂತಾಗಿದೆ

ಡಿಸಿಸಿ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ ಸಚಿವ ಮತ್ತು ಶಾಸಕರ ನಡುವೆ ಸಣ್ಣದಾಗಿ ವೈ ಮನಸು ಮೂಡಿತ್ತು. ಹೊಸದುರ್ಗದ ಶಾಸಕ ಗೋವಿಂದಪ್ಪ ಮಾತ್ರವಲ್ಲದೇ ಇತರ ಶಾಸಕರು ಕೂಡ ಬೇಸರಗೊಂಡಿದ್ದರು.

ಇದೀಗ ವಿವಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮುಖ್ಯಮಂತ್ರಿಗಳ ಕಾರ್ಯಕ್ರಮ ಮುಂದಾಗಿದ್ದು .ಮುಂದೆ ನಡೆಯುವಂತಹ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ಹಿರಿಯೂರಿನ ಶಾಸಕ ಡಿ ಸುಧಾಕರ್ ವಹಿಸಿಕೊಳ್ಳುವರೋ ? ಅಥವಾ ಡಿ ಸುಧಾಕರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆದರೆ, ಜಿಲ್ಲಾ ಉಸ್ತುವಾರಿ ಸಚಿವರ ಮೇಲಿನ ವೈಮನಸ್ಸು ಮರೆತು ಶಾಸಕ ಬಿ ಜಿ ಗೋವಿಂದಪ್ಪ ಹಾಗೂ ಜಿಲ್ಲೆಯ ಇತರ ಶಾಸಕರು ಪಾಲ್ಗೊಳ್ಳುವವರೇ? ಅಥವಾ ಗೈರಾಗುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಹಳ ಜೋರಾಗಿ ಚರ್ಚೆ ಆಗುತ್ತಿವೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಬೆಳವಣಿಗೆಗೆ ತೆರೆ ಬೀಳುವ ಸಂದರ್ಭ ಸಮೀಪದಲ್ಲಿದ್ದು ಅಲ್ಲಿವರೆಗೂ ಕಾದು ನೋಡಬೇಕಾಗಿದೆ.

Edited By : PublicNext Desk
PublicNext

PublicNext

19/01/2025 04:21 pm

Cinque Terre

11.63 K

Cinque Terre

0

ಸಂಬಂಧಿತ ಸುದ್ದಿ