", "articleSection": "Politics,News,Public News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/402744_1737286640_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Kaveri Hosadurg" }, "editor": { "@type": "Person", "name": "6362053469" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸದುರ್ಗ: ತಾಲೂಕಿನ ದೇವಪುರದಲ್ಲಿ ಕೆರೆಯಾಗಳಮ್ಮ ದೇವಿಯ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಶೂನ್ಯಮಾಸ ವಿರಾಮ...Read more" } ", "keywords": "Node,Chitradurga,Politics,Public-News,News", "url": "https://publicnext.com/node" } ಹೊಸದುರ್ಗ: ಶೂನ್ಯಮಾಸದ ನಸುಕಿನಲ್ಲಿ ಕೆರೆಯಾಗಳಮ್ಮ ರಥೋತ್ಸವ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಶೂನ್ಯಮಾಸದ ನಸುಕಿನಲ್ಲಿ ಕೆರೆಯಾಗಳಮ್ಮ ರಥೋತ್ಸವ

ಹೊಸದುರ್ಗ: ತಾಲೂಕಿನ ದೇವಪುರದಲ್ಲಿ ಕೆರೆಯಾಗಳಮ್ಮ ದೇವಿಯ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಶೂನ್ಯಮಾಸ ವಿರಾಮದ ಮಾಸವಿದ್ದಂತೆ.ಈ ಸಮಯದಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ.ಆದರೆ ತಾಲೂಕಿನ ದೇವಪುರ ಗ್ರಾಮ ದೇವತೆ ಕೆರೆಯಾಗಳಮ್ಮ ದೇವಿಯ ರಥೋತ್ಸವ ಶೂನ್ಯಮಾಸದ ನಸುಕಿನಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುತ್ತದೆ.

ಜಾತ್ರಾ ಮಹೋತ್ಸವ ಆರಂಭವಾದ ದಿನದಿಂದ ದೇವಪುರದಲ್ಲಿ ಭಕ್ತರ ಓಡಾಟ ತುಸು ಜೋರಾಗಿಯೇ ಇರುತ್ತದೆ. ಗ್ರಾಮದ ಮದುವೆಯಾಗಿರುವ ಹೆಣ್ಣು ಮಕ್ಕಳು ತಪ್ಪದೇ ರಥೋತ್ಸವಕ್ಕೆ ಬರುತ್ತಾರೆ.ಅವರು ದೇವಿಗೆ ಮಂಗಳಾರತಿ ಮಾಡಿ, ಮಡಿಲಕ್ಕಿ ನೀಡುವುದು ಹಲವು ವರ್ಷಗಳಿಂದ ಬಂದಿರುವ ಪದ್ಧತಿಯಾಗಿದೆ. ಹರಕೆ ಫಲಿಸಿದ ಭಕ್ತರು ರಥೋತ್ಸವದ ಸಮಯದಲ್ಲಿ ಬಾಳೆಹಣ್ಣು, ಮೆಣಸು,ನಾಣ್ಯ,ಹಾಕುವ ಮೂಲಕ ಭಕ್ತಿ ಸಮರ್ಪಿಸುವವರು. ಅಮ್ಮನವರು ರಥವೇರಿದರೆ ಶೂನ್ಯ ಮಾಸ ಮುಗಿದಂತೆ. ನಂತರ ಶುಭಕಾರ್ಯಗಳು ಜರುಗುತ್ತವೆ ಎನ್ನುತ್ತಾರೆ ದೇವಪುರ ಗ್ರಾಮದ ಗ್ರಾಮಸ್ಥರು.

Edited By : PublicNext Desk
Kshetra Samachara

Kshetra Samachara

19/01/2025 05:07 pm

Cinque Terre

880

Cinque Terre

0